2 ವರ್ಷಗಳಲ್ಲಿ 108 ಆಂಬುಲೆನ್ಸ್ ಗಳಲ್ಲಿ 4,360 ಮಕ್ಕಳ ಜನನ

108 ಆಂಬುಲೆನ್ಸ್ ಸೇವೆ ಕೇವಲ ಜೀವ ರಕ್ಷಕವಾಗಿ ಮಾತ್ರವಲ್ಲ. ಬದಲಾಗಿ ಜೀವನದ ಪ್ರಾರಂಭವೂ ಹೌದಾಗಿದೆ. ಕಳೆದ 2 ವರ್ಷಗಳಲ್ಲಿ ಬರೊಬ್ಬರಿ 4,360 ಮಕ್ಕಳು 108 ಆಂಬುಲೆನ್ಸ್ ನಲ್ಲೇ ಜನಿಸಿವೆ.
108 ಆಂಬುಲೆನ್ಸ್
108 ಆಂಬುಲೆನ್ಸ್
ಬೆಂಗಳುರು: 108 ಆಂಬುಲೆನ್ಸ್ ಸೇವೆ ಕೇವಲ ಜೀವ ರಕ್ಷಕವಾಗಿ ಮಾತ್ರವಲ್ಲ. ಬದಲಾಗಿ ಜೀವನದ ಪ್ರಾರಂಭವೂ ಹೌದಾಗಿದೆ. ಕಳೆದ 2 ವರ್ಷಗಳಲ್ಲಿ ಬರೊಬ್ಬರಿ 4,360 ಮಕ್ಕಳು 108 ಆಂಬುಲೆನ್ಸ್ ನಲ್ಲೇ ಜನಿಸಿವೆ. 
ಆಸ್ಪತ್ರೆ ದೂರದಲ್ಲಿರುವ ಸಂದರ್ಭಗಳಲ್ಲಿ ಗರ್ಭಿಣಿ ಸ್ತ್ರೀಯರನ್ನು ಕರೆದುಕೊಂಡು ಸಾಧ್ಯವಾಗದೇ 4,360 ಹೆರಿಗೆಗಳು 108 ರಲ್ಲೆ ನಡೆದಿವೆ. 2015-16 ರಲ್ಲಿ  1955 ಶಿಶುಗಳು, 2016-17 ನೇ ಸಾಲಿನಲ್ಲಿ 2405 ಮಕ್ಕಳು 108 ಆಂಬುಲೆನ್ಸ್ ನಲ್ಲಿ ಜನಿಸಿವೆ ಎಂದು ಕರ್ನಾಟಕದ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ವೈದ್ಯಕೀಯ ಸೇವೆಗಳು ತುರ್ತು ಅಗತ್ಯವಿದ್ದಾಗ ರೋಗಿಗಳನ್ನು ಆಸ್ಪತ್ರೆಗೆ ಶೀಘ್ರವೇ ಕರೆದೊಯ್ಯಲು 108 ಆಂಬುಲೆನ್ಸ್ ಸೇವೆಯನ್ನು 2008 ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಗ್ರಾಮೀಣ ಭಾಗಗಳಲ್ಲಿ ಮನೆಯಗಳಲ್ಲಿಯೇ ಹೆರಿಗೆ ಮಾಡಲಾಗುತ್ತದೆ. ಆದರೆ ಹೆರಿಗೆ ಕಷ್ಟಾವಾದಾಗ 108 ಕ್ಕೆ ಕರೆ ಮಾಡುತ್ತಾರೆ. ಹಲವು ಸಂದರ್ಭಗಳಲ್ಲಿ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿವೆ, ಆಂಬುಲೆನ್ಸ್ ಗಳಲ್ಲಿ ನುರಿತ ದಾದಿಯರಿರುತ್ತಾರೆ ಆದ್ದರಿಂದ ತಾಯಿ, ಮಗುವಿಗೆ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com