ಕರ್ನಾಟಕ: ವೈದ್ಯಕೀಯ ಶಿಕ್ಷಣ ಮತ್ತಷ್ಟು ದುಬಾರಿ; ಶೇ. 10 ರಷ್ಟು ಪ್ರವೇಶ ಶುಲ್ಕ ಏರಿಕೆ

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇ.10 ರಷ್ಟು ಪ್ರವೇಶ ಶುಲ್ಕ ಏರಿಸಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಈ ಶುಲ್ಕ ಮುಂದಿನ ಮೂರು ವರ್ಷಗಳಿಗೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಡಾಕ್ಟರ್ ಆಗಬೇಕೆಂದು ಕನಸು ಕಾಣುವ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿದೆ. 
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶೇ.10 ರಷ್ಟು ಪ್ರವೇಶ ಶುಲ್ಕ ಏರಿಸಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಈ ಶುಲ್ಕ ಮುಂದಿನ ಮೂರು ವರ್ಷಗಳಿಗೂ ಅನ್ವಯವಾಗಲಿದೆ.
ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ನಡುವೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ವೈದ್ಯ ಶಿಕ್ಷಣ ಸಚಿವ ಶರಣಬಸಪ್ಪ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರವೇಶ ಶುಲ್ಕ ಏರಿಕೆಗೆ ನಿರ್ಧರಿಸಲಾಗಿದ್ದು, ಮೂರು ವರ್ಷದ ನಂತರ ಮತ್ತೆ ಪರಿಶೀಲನೆ ನಡೆಯಲಿದೆ.
2017–18ನೇ ಸಾಲಿಗೆ ಎಂಬಿಬಿಎಸ್‌ ಕೋರ್ಸ್‌ ಶುಲ್ಕ ಸರ್ಕಾರಿ ಕಾಲೇಜುಗಳಲ್ಲಿ ರು. 70,000ದಿಂದ ರು. 77,000 ಮತ್ತು ಖಾಸಗಿ ಕಾಲೇಜುಗಳ ಶುಲ್ಕ ರು. 5.75 ಲಕ್ಷದಿಂದ ರು. 6.35 ಲಕ್ಷಕ್ಕೆ ಏರಿಕೆ ಆಗಲಿದೆ.
2020-21ರ ವೇಳೆಗೆ ಸರ್ಕಾರಿ ಕೋಟಾದ ಸೀಟಿಗೆ 1 ಲಕ್ಷ ಹಾಗೂ ಖಾಸಗಿ ಸೀಟಿಗೆ 9 ಲಕ್ಷವಾಗಲಿದೆ. ಕಳೆದ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಶುಲ್ಕವನ್ನು ಶೇ. 30ರಷ್ಟು ಹೆಚ್ಚಳ ಮಾಡಲಾಗಿತ್ತು.
ಕಳೆದ ಮೂರು ವರ್ಷಗಳಿಂದ ಸರ್ಕಾರಿ ಖೋಟಾದ ಮೆಡಿಕಲ್ ಸೀಟುಗಳ ಶುಲ್ಕದಲ್ಲಿ 25 ಸಾವಿರ ರು. ಏರಿಕೆಯಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 16,000 ರೂ. ಶುಲ್ಕ ಇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com