ಹಣ್ಣು-ತರಕಾರಿಗಳನ್ನು ದೀರ್ಘಾವಧಿಯವರೆಗೆ ಕೆಡದಂತೆ ಇಡಲು ತಂಪಾದ ಪುಶ್ ಕಾರ್ಟ್

ನಗರದ ಹಿರಿಯ ಸಂಶೋಧಕರೊಬ್ಬರು ಪುಶ್ ಕಾರ್ಟ್ ಹೊಂದಿರುವ ಸುಸಜ್ಜಿತ ಶೈತ್ಯೀಕರಣ ವ್ಯವಸ್ಥೆಯನ್ನು ...
ತಮ್ಮ  ಯೋಜನೆಯನ್ನು ವಿವರಿಸುತ್ತಿರುವ ಎ.ಎಸ್.ವೇಣು
ತಮ್ಮ ಯೋಜನೆಯನ್ನು ವಿವರಿಸುತ್ತಿರುವ ಎ.ಎಸ್.ವೇಣು
ಬೆಂಗಳೂರು: ನಗರದ ಹಿರಿಯ ಸಂಶೋಧಕರೊಬ್ಬರು ಪುಶ್ ಕಾರ್ಟ್ ಹೊಂದಿರುವ ಸುಸಜ್ಜಿತ ಶೈತ್ಯೀಕರಣ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸಿದ್ದು ಇದರಿಂದ ಹಣ್ಣು, ತರಕಾರಿ ವ್ಯಾಪಾರಿಗಳು ದೀರ್ಘಕಾಲದವರೆಗೆ ಪದಾರ್ಥಗಳನ್ನು ಕೆಡದಂತೆ ಇಡಬಹುದು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್ ಆರ್)ಯ ಎ.ಎಸ್.ವೇಣು(28 ವ) ಎಂಬುವವರು ಈ ಪುಶ್ ಕಾರ್ಟ್ ನ್ನು ಅಭಿವೃದ್ಧಿಪಡಿಸಿದ್ದಾರೆ.  ಅವರ ಈ ಮಾದರಿಗೆ ಎಫ್ ಕೆಸಿಸಿಐ ಸಮಾರಂಭದಲ್ಲಿ ಪ್ರಶಸ್ತಿ ಸಿಕ್ಕಿದೆ. ಮೂರು ತಿಂಗಳಲ್ಲಿ ತಾವು ಈ ಪುಶ್ ಕಾರ್ಟನ್ನು ತಯಾರಿಸಲು ಆರಂಭಿಸಲಿದ್ದು ಪೇಟೆಂಟ್ ಗೆ ಅರ್ಜಿ ಹಾಕಿದ್ದೇನೆ ಎಂದರು.
ಈ ಪ್ರತಿ ಪುಶ್ ಕಾರ್ಟ್ ಗೆ 10ರಿಂದ 12,000 ರೂಪಾಯಿ ವೆಚ್ಚವಾಗುತ್ತದೆ.  ವಾರಕ್ಕೆ 500 ರೂಪಾಯಿ ಬಾಡಿಗೆಯಂತೆ ಕೂಡ ಸಿಗುತ್ತದೆ. ಇದರಲ್ಲಿ ಹಸಿರು ಸೊಪ್ಪು ತರಕಾರಿಯನ್ನು ಮೂರು ದಿನಗಳವರೆಗೆ ಮತ್ತು ಇತರ ತರಕಾರಿಗಳನ್ನು 7 ದಿನಗಳವರೆಗೆ ಹಾಳಾಗದಂತೆ ಇಡಬಹುದು. ಟೊಮ್ಯಾಟೊಗಳನ್ನು ಎರಡು ವಾರಗಳವರೆಗೆ ಇಡಬಹುದು. ಪುಶ್ ಕಾರ್ಟ್ ನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಒಯ್ಯಬಹುದು.
ಎಫ್ ಕೆಸಿಸಿಐ ನಡೆಸಿದ ವ್ಯಾಪಾರ ಸ್ಪರ್ಧೆಯಲ್ಲಿ ಈ ಮಾದರಿಗೆ ಮೊದಲ ಬಹುಮಾನ 1.5 ಲಕ್ಷ ರೂಪಾಯಿ ಸಿಕ್ಕಿದೆ. ಈ  ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ  ವೇಣು, ನಾನು ಹಳ್ಳಿಯಿಂದ ಬಂದವನು. 7ನೇ ತರಗತಿಯಲ್ಲಿದ್ದಾಗ ಬೆಂಗಳೂರಿಗೆ ಬಂದೆವು. ನಗರದಲ್ಲಿ ಅನೇಕ ಹಣ್ಣು, ತರಕಾರಿ ವ್ಯಾಪಾರಿಗಳು ಪದಾರ್ಥಗಳು ಹಾಳಾಗದಂತೆ ಇಡಲು ಹರ ಸಾಹಸ ಪಡುತ್ತಾರೆ. ನಂತರ ಹಾಳಾಗಿ ಹೋಗುತ್ತದೆ.
ಇಂತವರಿಗೆ ಈ ಉಪಕರಣ ಸಹಾಯವಾಗಬಹುದು ಎನ್ನುತ್ತಾರೆ. ತಮ್ಮ ವಿದ್ಯಾಲಯದ ಪ್ರಾಂಶುಪಾಲರ ಜೊತೆ ಚರ್ಚಿಸಿ ಈ ಮಾದರಿ ತಯಾರಿಸಿದೆ ಎನ್ನುತ್ತಾರೆ ವೇಣು.
ವೇಣು ಅವರ ಶೈತಲೀಕರಣದ ಉಪಕರಣವನ್ನು ರೆಫ್ರಿಜರೇಟರ್ ಗೆ ಬದಲಾಗಿ ಅಗ್ಗದ ಬೆಲೆಯಲ್ಲಿ ಬಳಸಬಹುದು.
ಈ ಸಾಧನದಲ್ಲಿ ಉಷ್ಣತೆ ಹೊರಗಿನ ವಾತಾವರಣಕ್ಕಿಂತ 8ರಿಂದ 10 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುತ್ತದೆ ಮತ್ತು ತೇವಾಂಶ ಶೇಕಡಾ 90ರಷ್ಟು ಹೆಚ್ಚಾಗುತ್ತದೆ. 2 ಇಂಚು ಪದರದ ಲೋಹದ ಚೌಕಟ್ಟು ಇದ್ದು ಇಂಗಾಲವನ್ನು ಹೊಂದಿದೆ. ಎರಡು ತೊಟ್ಟಿಗಳು ನೀರಿನಿಂದ ತುಂಬಿರುತ್ತವೆ.ಚೌಕದ ಮೇಲೆ ಮತ್ತು ಕೆಳಗೆ ಅಂಟಿಕೊಂಡಿರುತ್ತದೆ. ತೊಟ್ಟಿಗಳ ನಡುವೆ ನೇತಾಡಿಸಲಾಗಿದೆ. ಕ್ಯಾಪಿಲರ್ ಕ್ರಿಯೆಯಿಂದ ಅದು ನೀರನ್ನು ಮೇಲಿನ ತೊಟ್ಟಿಯಿಂದ ಕೆಳಗಿನ ತೊಟ್ಟಿಗೆ ಬಿಡುತ್ತದೆ. ಮೇಲಿನ ತೊಟ್ಟಿಯಲ್ಲಿ ನೀರು ಖಾಲಿಯಾದಾಗ ಅದಕ್ಕೆ ನೀರನ್ನು ಕೈಯಿಂದ ಅಥವಾ ಮೋಟಾರಿನ ಸಹಾಯದಿಂದ ತುಂಬಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com