ಧಾರವಾಡ: 11 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

ದೇವರಕೊಂಡ ಗ್ರಾಮದ 11 ದಲಿತ ಕುಟುಂಬಗಳಿಗೆ ದೇವಸ್ಥಾನ, ದಿನಸಿ ಅಂಗಡಿಗಳು, ಹೋಟೆಲ್‌ ಪ್ರವೇಶ ನಿರ್ಬಂಧಿಸಿ ಗ್ರಾಮಸ್ಥರು ಬಹಿಷ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಧಾರವಾಡ: ದೇವರಕೊಂಡ ಗ್ರಾಮದ 11 ದಲಿತ ಕುಟುಂಬಗಳಿಗೆ ದೇವಸ್ಥಾನ, ದಿನಸಿ ಅಂಗಡಿಗಳು, ಹೋಟೆಲ್‌ ಪ್ರವೇಶ ನಿರ್ಬಂಧಿಸಿ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.
ಧಾರವಾಡದಿಂದ 45 ಕಿಮೀ ದೂರದಲ್ಲಿರುವ ಕಲಘಟಗಿ ತಾಲೂಕಿನ ಗ್ರಾಮವಾಗಿದೆ. ಬಹಿಷ್ಕಾರಕ್ಕೊಳಗಾಗಿರುವ 11 ಕುಟುಂಬಗಳಿಗೆ ಯಾವುದೇ ರೀತಿಯ ಸಾಮಾಗ್ರಿಗಳನ್ನು ನೀಡಬಾರದು ಎಂದು ಗ್ರಾಮದ ಮುಖಂಡರು ಆದೇಶಿಸಿದ್ದಾರೆ.
ದಲಿತರ ಕೇರಿಯಲ್ಲಿದ್ದ ದುರ್ಗಮ್ಮ ದೇವಸ್ಥಾನಕ್ಕೆ ಬಸವಿ ಕರು ಬಿಟ್ಟಿದ್ದು, ಅದು ಸವರ್ಣೀಯರಿಗೆ ಸೇರಿದ ಹೊಲದಲ್ಲಿ ಮೇವು ತಿಂದ ವಿಚಾರಕ್ಕೆ ಸವರ್ಣೀಯರೊಂದಿಗೆ ವಾಗ್ವಾದ ನಡೆದಿತ್ತು. ಗ್ರಾಮದ ಹಿರಿಯರು ಸೇರಿ ಸಮಸ್ಯೆಯನ್ನು ಬಗೆಹಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ದುರ್ಗಪ್ಪ ನೆರೆಹೊರೆ ಗ್ರಾಮದವರೊಂದಿಗೆ ಸೇರಿ ಈರಪ್ಪ ಮತ್ತು ಇತರ 10 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾನೆ.
ಬಹಿಷ್ಕಾರಕ್ಕೊಳಗಾಗಿರುವ ದಲಿತ ಕುಟುಂಬಗಳು ಕಲಘಟಗಿ ಪೊಲೀಸರುನ್ನು ಭೇಟಿ ಮಾಡಿ ತಮಗಾಗಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂಬಂಧ ಗ್ರಾಮದ 8 ಮಂದಿಯನ್ನು ವಿಚಾರಣೆ ನಡೆಸಲಾಗಿದ್ದು, ಯಾರೋಬ್ಬರನ್ನು ಬಂಧಿಸಲಾಗಿಲ್ಲ, ಗ್ರಾಮದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com