ಬಸ್ ಭಾಗ್ಯ ಬೇಕು: ಬೆಂಗಳೂರು ನಾಗರಿಕರ ವಿಶೇಷ ಅಭಿಯಾನ

ಬೆಂಗಳೂರು ನಾಗರಿಕರು ಹಾಗೂ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಬಸ್ ಭಾಗ್ಯ ಬೇಕು ಎಂಬ ಅಭಿಯಾನ ...
ಬಿಎಂಟಿಸಿ ಬಸ್ (ಸಂಗ್ರಹ ಚಿತ್ರ)
ಬಿಎಂಟಿಸಿ ಬಸ್ (ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ನಾಗರಿಕರು ಹಾಗೂ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಬಸ್ ಭಾಗ್ಯ ಬೇಕು ಎಂಬ ಅಭಿಯಾನ ಆರಂಭಿಸಿದೆ.

ಬಿಎಂಟಿಸಿ ಮ್ಯಾನೇಜಿಂಗ್ ಡೈರೆಕ್ಟರ್  ಏಕರೂಪ್ ಕೌರ್ ಅವರನ್ನು ಭೇಟಿ ಮಾಡಿದ ಈ ತಂಡ ನಾಗರಿಕರ ಬೇಡಿಕೆಗಳನ್ನು ಈಡೇರಿಸಲು ಗಮನ ಹರಿಸುವಂತೆ ಮನವಿ ಮಾಡಿದೆ. ಬಜೆಟ್ ನಲ್ಲಿ ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಟಿಕೆಟ್ ದರವನ್ನು ಕಡಿಮೆ ಮಾಡುವಂತೆ ವೇದಿಕೆ ಮನವಿ ಮಾಡಿದೆ.

ಬಸ್ ಗಳ ಸಂಖ್ಯೆ ಏರಿಸುವಂತೆ ಮಾಡಿರುವ ಮನವಿಗೆ ಬಿಎಂಟಿಸಿ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಿಶೇಷವಾಗಿ ಕಾರ್ಮಿಕರು,  ಗಾರ್ಮೆಂಟ್ಸ್ ಕಾರ್ಖಾನೆ ನೌಕರರು, ನೈರ್ಮಲ್ಯ ಸಿಬ್ಬಂದಿ ಹಾಗೂ ದ್ವಾರ ಪಾಲಕರು, ಸೆಕ್ಯೂರಿಟಿ ಮತ್ತು ದಿನಗೂಲಿ ಕಾರ್ಮಿಕರಿಗೆ ಬಸ್ ಗಳ ಅವಶ್ಯಕತೆ ಇದೆ ಎಂದು ವೇದಿಕೆಯ ಸದಸ್ಯ ಶ್ರೀನಿವಾಸ್ ಆವಲಹಳ್ಳಿ ಎಂಬುವರು ತಿಳಿಸಿದ್ದಾರೆ.

ಬಿಎಂಟಿಸಿ ಬಸ್ ಗಳಿಗೆ ಸಬ್ಸಿಡಿ, ಖರ್ಚು ಮತ್ತು ವೆಚ್ಚಗಳು ಹಾಗೂ ತೆರಿಗೆ ಮತ್ತು ವೇತನಗಳಿಗಾಗಿ ಟಿಕೆಟ್ ದರ ಏರಿಕೆ ಮತ್ತು ಇಳಿಕೆ, ಬಸ್ ಗಳ ಸಂಖ್ಯೆ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಬಸ್ ಭಾಗ್ಯ ಬೇಕು ಕ್ಯಾಂಪೈನ್ ತಂಡ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದೆ.

ಯೂ ಟರ್ನ್ ಸಿನಿಮಾ ಖ್ಯಾತಿಯ ಶ್ರದ್ಧಾ ಶ್ರೀನಾಥ್, ರಾಕ್ ಬ್ಯಾಂಡ್ ಗಾಯಕ, ಬ್ರೂಸ್ ಲೀ ಮಾಣಿ, ಅಶ್ವಿನ್ ಶರ್ಮಾ, ಸೇರಿದಂತೆ ಹಲವು ಜನಪ್ರಿಯ ವ್ಯಕ್ತಿಗಳು ಈ ಬಸ್ ಭಾಗ್ಯ ಬೇಕು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com