2 ದಶಕಗಳ ನಂತರ ಮೈಸೂರು ಮೃಗಾಲಯದಲ್ಲಿ ದೇಶಿ ತಳಿ ಸಿಂಹ

ದೇಶದಲ್ಲಿಯೇ ಅತಿದೊಡ್ಡ ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರು...
ದೇಶಿ ತಳಿ ಸಿಂಹ ಶೌರ್ಯ
ದೇಶಿ ತಳಿ ಸಿಂಹ ಶೌರ್ಯ
ಬೆಂಗಳೂರು: ದೇಶದಲ್ಲಿಯೇ ಅತಿದೊಡ್ಡ ಮೃಗಾಲಯಗಳಲ್ಲಿ ಒಂದಾಗಿರುವ ಮೈಸೂರು ಮೃಗಾಲಯದಲ್ಲಿ ಅನೇಕ ಪ್ರಬೇಧದ ಪ್ರಾಣಿಗಳಿದ್ದರೂ ಕೂಡ ಕಳೆದ 20 ವರ್ಷಗಳಿಂದ ಇಲ್ಲಿ ಶುದ್ಧ ಏಷ್ಯಾ ಸಿಂಹದ ತಳಿಯಿರಲಿಲ್ಲ. 
ಇಲ್ಲಿ 3 ಸಿಂಹಿಣಿಗಳು ಮತ್ತು ಒಂದು ಸಿಂಹವಿದ್ದರೂ ಕೂಡ ಎಲ್ಲವೂ ಆಫ್ರೋ-ಏಷ್ಯಾಟಿಕ್ ಸಿಂಹ ತಳಿಗಳಾಗಿದ್ದು ದೇಶಿ ತಳಿ ಇಲ್ಲದಿದ್ದದ್ದು ಇಲ್ಲಿನ ಅಧಿಕಾರಿಗಳಿಗೆ ಕೊರತೆಯೆನಿಸುತ್ತಿತ್ತು. ಕೊನೆಗೂ ಈ ಆಸೆ ನೆರವೇರಿದ್ದು ಮೊನ್ನೆ ಸೋಮವಾರ ಶೌರ್ಯ ಎನ್ನುವ ಹೊಸ ದೇಶಿ ತಳಿ ಸಿಂಹ ಮೈಸೂರು ಮೃಗಾಲಯವನ್ನು ಸೇರಿದೆ.
ಗುಜರಾತ್ ನ ರಾಜ್ ಕೋಟ್ ನಿಂದ 3 ವರ್ಷದ ಏಷ್ಯಾ ತಳಿಯ ಸಿಂಹವನ್ನು ಇಲ್ಲಿಗೆ ತರಲಾಗಿದೆ. ಮೃಗಾಲಯಕ್ಕೆ ಭೇಟಿ ನೀಡುವ ಜನರಿಗೆ ಪ್ರದರ್ಶನಕ್ಕೆ ಇಡುವ ಮುನ್ನ 10 ದಿನಗಳ ಕಾಲ ಇಲ್ಲಿನ ಅಧಿಕಾರಿಗಳ ವೀಕ್ಷಣೆಯಲ್ಲಿರುತ್ತದೆ.
ನಿಗಾ ಸಮಯದಲ್ಲಿ ಸಿಂಹದ ಚಲನ-ವಲನ ಮತ್ತು ಆಹಾರದ ಬಗ್ಗೆ ದಿನವಿಡೀ ವೈಫೈ ಕ್ಯಾಮರಾ ಮೂಲಕ ವೀಕ್ಷಣೆ ಮಾಡಲಾಗುತ್ತಿರುತ್ತದೆ. ಪ್ರಾಣಿ ಸಾಕಣೆದಾರರು, ಮೇಲುಸ್ತುವಾರಿ ಹೊಂದಿರುವವರು, ಅರಣ್ಯಾಧಿಕಾರಿಗಳು, ಪಶುವೈದ್ಯರು ಮತ್ತು ಕಾರ್ಯಕಾರಿ ನಿರ್ದೇಶಕರನ್ನು ಮಾತ್ರ ಸಿಂಹದ ವೀಕ್ಷಣೆಗೆ ಬಿಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com