ಖ್ಯಾತ ಜ್ಯೋತಿಷಿ ಡಾ.ಎಸ್.ಕೆ ಜೈನ್ ಅವರ ಕಾಲಚಕ್ರ ಪಂಚಾಂಗ ಬಿಡುಗಡೆ

ಪ್ರಸಿದ್ಧ ಜ್ಯೋತಿಷಿ ಎಸ್ .ಕೆ ಜೈನ್ ಅವರ ಕಾಲಚಕ್ರ ಪಂಚಾಂಗವನ್ನು ಸ್ಯಾಂಡಲ್ ವುಡ್ ನಟಿ ಭಾವನಾ ಬಿಡುಗಡೆಗೊಳಿಸಿದರು....
ನಟಿ ಭಾವನಾರಿಂದ ಎಸ್ ಕೆ ಜೈನ್ ಅವರ ಕಾಲಚಕ್ರ ಪಂಚಾಂಗ ಬಿಡುಗಡೆ
ನಟಿ ಭಾವನಾರಿಂದ ಎಸ್ ಕೆ ಜೈನ್ ಅವರ ಕಾಲಚಕ್ರ ಪಂಚಾಂಗ ಬಿಡುಗಡೆ
Updated on

ಬೆಂಗಳೂರು: ಪ್ರಸಿದ್ಧ ಜ್ಯೋತಿಷಿ ಎಸ್ .ಕೆ ಜೈನ್ ಅವರ ಕಾಲಚಕ್ರ ಪಂಚಾಂಗವನ್ನು ಸ್ಯಾಂಡಲ್ ವುಡ್ ನಟಿ ಭಾವನಾ ಬಿಡುಗಡೆಗೊಳಿಸಿದರು.

ವಿವಿಧ ಋತುಮಾನಗಳು, ಗ್ರಹಣಗಳು ಹಾಗೂ ಗ್ರಹಗಳ ಚಲನೆಯಿಂದ ಮನುಷ್ಯರ ಮೇಲಾಗುವ ಪರಿಣಾಮಗಳ ಬಗ್ಗೆ ಕಾಲಚಕ್ರ ಪಂಚಾಂಗದಲ್ಲಿ ವಿವರ ನೀಡಲಾಗಿದೆ.

ಅಮಾವಾಸ್ಯೆ ವೇಳೆ ಹಲವು ಕೆಟ್ಟ ಘಟನೆಗಳು ನಡೆಯುತ್ತವೆ, ವರನಟ ಡಾ. ರಾಜ್ ಕುಮಾರ್ ಅಪಹರಣಕ್ಕೆ ಅಮಾವಾಸ್ಯೆ ಕಾರಣ, ಎಐಎಡಿಎಂಕೆ ನಾಯಕಿ ವಿ.ಕೆ ಶಶಿಕಲಾ ಅವರ ಪರಿಸ್ಥಿತಿಗೆ ನಕ್ಷತ್ರಗಳು ಕಾರಣವಾಗಿವೆ ಎಂದು ಜೈನ್ ತಿಳಿಸಿದರು.

ನಟಿ ಭಾವನಾ ತಮ್ಮು ಮುಂದಿನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಕೇಳಿದರು. ನಾನು ಜ್ಯೋತಿಷ್ಯವನ್ನು ನಂಬುತ್ತೇನೆ.  ಆದರೆ ದಿನ ಪತ್ರಿಕೆಗಳಲ್ಲಿ ಪ್ರತಿದಿನ ಬರುವ ರಾಶಿ ಭವಿಷ್ಯ ಓದುವವಳಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com