ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರು ಈಗ ಬಿಡಿಎ ಆಯುಕ್ತರಾಗಿ ನೇಮಕಗೊಂಡಿದ್ದರೆ, ರಾಜ್ ಕುಮಾರ್ ಖತ್ರಿ ಅವರನ್ನು ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಅರ್ಕಾವತಿ ಲೇಔಟ್ ಹಾಗೂ ಕೆಂಪೇಗೌಡ ಲೇಔಟ್ ಗಳ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಜನಸಾಮಾನ್ಯರಿಗೆ ಸಹಾಯ ಮಾಡುತ್ತಿಲ್ಲ ಎಂಬ ಆರೋಪದ ಪರಿಣಾಮವಾಗಿ ರಾಜ್ ಕುಮಾರ್ ಖತ್ರಿ ಅವರ ವರ್ಗಾವಣೆಗೆ ಒತ್ತಡ ಹೆಚ್ಚಿತ್ತು. ರಾಜ್ ಕುಮಾರ್ ಖತ್ರಿ ಅವರನ್ನು ವರ್ಗಾವಣೆಗೊಳಿಸಲು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ನೇತೃತ್ವದ ನಿಯೋಗ ಜ.28 ರಂದೇ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತಾದರೂ ಈಗ ರಾಜ್ ಕುಮಾರ್ ಖತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ.