ನಂದಿ ಬೆಟ್ಟ ಅಭಿವೃದ್ಧಿ ಯೋಜನೆ ಕುಂಠಿತ, ಮತ್ತಷ್ಟು ವಿಳಂಬ

ನಂದಿ ಬೆಟ್ಟ ಅಭಿವೃದ್ಧಿ ಯೋಜನೆ ಮತ್ತಷ್ಟು ವಿಳಂಬವಾಗಲಿದೆ.
ನಂದಿ ಬೆಟ್ಟ ಅಭಿವೃದ್ಧಿ ಯೋಜನೆ ಕುಂಠಿತ, ಮತ್ತಷ್ಟು ವಿಳಂಬ
ನಂದಿ ಬೆಟ್ಟ ಅಭಿವೃದ್ಧಿ ಯೋಜನೆ ಕುಂಠಿತ, ಮತ್ತಷ್ಟು ವಿಳಂಬ
ಬೆಂಗಳೂರು: ನಂದಿ ಬೆಟ್ಟ ಶೀಘ್ರವೇ ಸಾಹಸ ಕ್ರೀಡೆಗಳ ತಾಣವಾಗಲಿದೆ ಎಂದು ಕಾದು ಕುಳಿತಿರುವವರಿಗೆ ಇಲ್ಲೊಂದು ಬೇಸರದ ಸುದ್ದಿ ಇದೆ. ಅದೇನೆಂದರೆ ನಂದಿ ಬೆಟ್ಟ ಅಭಿವೃದ್ಧಿ ಯೋಜನೆ ಮತ್ತಷ್ಟು ವಿಳಂಬವಾಗಲಿದೆ. ನಂದಿ ಬೆಟ್ಟವನ್ನು ಸಾಹಸ ಕ್ರೀಡೆಗಳ ತಾಣವನ್ನಾಗಿಸುವುದರ ಯೋಜನೆ ಕೇವಲ ಪೇಪರ್ ಗೆ ಮಾತ್ರ ಸೀಮಿತವಾಗಿದೆ. ಇದಕ್ಕೆ ಕಾರಣ ಅಂತರ ವಿಭಾಗೀಯ ವಿಷಯಗಳು ಎನ್ನುತ್ತಿದ್ದಾರೆ ಅಧಿಕಾರಿಗಳು.
ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಂದಿ ಬೆಟ್ಟದ ಅಭಿವೃದ್ಧಿ ಆದ್ಯತೆಯ ವಿಷಯವಾಗಿದೆ. ಆದರೆ  ಅಂತರ ವಿಭಾಗೀಯ ವಿಷಯಗಳು ಸೇರಿರುವುದರಿಂದ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ನಂದಿ ಬೆಟ್ಟದ ಯೋಜನೆಗೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ  ಹೀಗೆ ಅನೇಕ ಇಲಾಖೆಗಳು ಒಂದೊಂದು ಯೋಜನೆಯನ್ನು ಮುಂದಿಟ್ಟುಕೊಂಡಿವೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ನಂದಿ ಬೆಟ್ಟವನ್ನು ಸಾಹಸ ಕ್ರೀಡೆಗಳ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿಲ್ಲ, ಎಲ್ಲಾ ಇಲಾಖೆಗಳನ್ನು ಒಂದೆಡೆ ಸೇರಿಸುವುದು ಸವಾಲಿನ ಸಂಗತಿ  ಎಂದು ಸಚಿವರು ಹೇಳಿದ್ದಾರೆ. 
ನಂದಿ ಬೆಟ್ಟದ ಅಭಿವೃದ್ಧಿ ಯೋಜನೆಯ ಗುರಿಯ ಬಗ್ಗೆ ಎಲ್ಲಾ ಇಲಾಖೆಗಳೊಂದಿಗೂ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರವೇ ಸಾಹಸ ಕ್ರೀಡೆಗಳ ತಾಣವನ್ನಾಗಿಸುವ ಯೋಜನೆಯನ್ನು ಪೂರ್ಣಗೊಳಿಸಲಿದ್ದೇವೆ, ಎಲ್ಲವೂ ಅಂದುಕೊಂಡಂತೆಯೇ ಆದರೆ ಪರಿಸರ ಜಾಗೃತಿ ಶಿಬಿರಗಳು, ಚಾರಣ, ಫ್ಯಾಮಿಲಿ ಫನ್ ಆಕ್ಟಿವಿಟಿ, ಹೆರಿಟೇಜ್ ವಾಕ್, ಸೈಕ್ಲಿಂಗ್ ಸೇರಿದಂತೆ ಹಲವು ಸಾಹಸ ಕ್ರೀಡೆಗಳ ತಾಣವಾಗಿ ನಂದಿ ಬೆಟ್ಟ ರೂಪುಗೊಳ್ಳಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com