ಶ್ರವಣಬೆಳಗೊಳ- ನೆಲಮಂಗಲ ರೈಲು ಮಾರ್ಗ ಪೂರ್ಣಗೊಂಡರೂ ಉದ್ಘಾಟನೆ ಮುಂದೂಡಿಕೆ

ನೆಲಮಂಗಲ-ಶ್ರವಣಬೆಳಗೊಳ ರೈಲು ಮಾರ್ಗ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಶ್ರವಣಬೆಳಗೊಳ- ನೆಲಮಂಗಲ ರೈಲು ಮಾರ್ಗ ಪೂರ್ಣಗೊಂಡರೂ ಉದ್ಘಾಟನೆ ಮುಂದೂಡಿಕೆ
ಶ್ರವಣಬೆಳಗೊಳ- ನೆಲಮಂಗಲ ರೈಲು ಮಾರ್ಗ ಪೂರ್ಣಗೊಂಡರೂ ಉದ್ಘಾಟನೆ ಮುಂದೂಡಿಕೆ
ಬೆಂಗಳೂರು: ನೆಲಮಂಗಲ-ಶ್ರವಣಬೆಳಗೊಳ ರೈಲು ಮಾರ್ಗ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಮಾ.9 ಕ್ಕೆ ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ  ಮಾಡಲು ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಸ್ತಾವನೆ ನೀಡಿದ್ದರಾದರೂ, ಸಿಎಂ ಸಿದ್ದರಾಮಯ್ಯ ಬಜೆಟ್ ಕಾರಣ ನೀಡಿ ಉದ್ಘಾಟನೆಯ ದಿನಾಂಕದಂದು ಉಪಸ್ಥಿತಿ ಇರುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಮನವಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ಮಾರ್ಗ ಉದ್ಘಾಟನೆ ದಿನಾಂಕ ಮುಂದೂಡಲ್ಪಟ್ಟಿದೆ. 
ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರು 111 ಕಿಮಿ ದೂರದ ಬೆಂಗಳೂರು-ಹಾಸನ ರೈಲು ಮಾರ್ಗದ ಕಾರ್ಯಾರಂಭಕ್ಕೆ ಫೆ.21 ರಂದೇ ಅನುಮತಿ ನೀಡಿದ್ದಾರೆ.  ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರೇ ರೈಲು ಮಾರ್ಗವನ್ನು ಉದ್ಘಾಟಿಸಬೇಕೆಂಬುದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಭಿಪ್ರಾಯ ಹೊಂದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುವುದು ಸಾಧ್ಯವಾಗದೇ ಇದ್ದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ರಾಜ್ಯ ಬಜೆಟ್ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದ ದಿನಾಂಕವನ್ನೂ ಮುಂದೂಡಲಾಗಿದ್ದು, ಮಾ.15 ರ ನಂತರ ಉದ್ಘಾಟನಾ ಕಾರ್ಯಕ್ರಮ ಆಯೋಜಿಸುವಂತೆ ರೈಲ್ವೆ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com