ದುಬಾರಿ ಹ್ಯೂಬ್ಲಾಟ್ ವಾಚ್ ಪ್ರಕರಣ: ಎಸಿಬಿ ಯಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ದುಬಾರಿ ಹ್ಯೂಬ್ಲಾಟ್ ವಾಚ್ ಪ್ರಕರಣ ತನಿಖೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದುಬಾರಿ ಹ್ಯೂಬ್ಲಾಟ್ ವಾಚ್ ಪ್ರಕರಣ ತನಿಖೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ.

ಕಳೆದ ವರ್ಷ ಮಾರ್ಚ್ 14 ರಂದು ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕು ಗೊಳಿಸಿ ಎಸಿಬಿ ರಚಿಸಿ ಸರಿಯಾಗಿ ಇಂದಿಗೆ ಒಂದು ವರ್ಷವಾಗಿದೆ.

ಸಿಎಂ ಸಿದ್ದರಾಮಯ್ಯ ಅವರು 70 ಲಕ್ಷ ಬೆಲೆಯ ವಜ್ರ ಖಚಿತ ಹ್ಯೂಬ್ಲಾಟ್ ವಾಚ್ ಧರಿಸಿದ್ದರ ಸಂಬಂಧ ವಕೀಲ ನಟರಾಜ ಶರ್ಮ, ಆರ್ ಟಿ ಐ ಕಾರ್ಯಕರ್ತ ರಾಮಮೂರ್ತಿ ಗೌಡ ಮತ್ತು ಟಿ.ಜೆ ಅಬ್ರಹಾಂ ಪ್ರತ್ಯೇಕವಾಗಿ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ದೂರು ಸ್ವೀಕರಿಸಿದ ನಂತರ ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು. ದುಬೈ ಮೂಲದ ಸಿಎಂ ಸ್ನೇಹಿತ ಡಾ. ಗಿರೀಶ್ ಚಂದ್ರ ವರ್ಮಾ ಅವರ ಹೇಳಿಕೆ ಆಧಾರದ ಮೇಲೆ  ಪ್ರಾಥಮಿಕ ತನಿಖೆಯ ನಂತರ ಪ್ರಕರಣವನ್ನು ಕ್ಲೋಸ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ನನ್ನ ಹ್ಯೂಬ್ಲೋಟ್ ವಾಚ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು, ನಂತರ ನಾನು ವಾಚ್ ಅನ್ನು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡಿದೆ. ಆದರೆ ಅದನ್ನು ತೆಗೆದುಕೊಳ್ಳಲು ಸಿಎಂ  ನಿರಾಕರಿಸಿದ್ದರು, ನಾನೇ ಬಲವಂತವಾಗಿ ನೀಡಿದ್ದೆ ಎಂದು ಡಾ.ಗಿರೀಶ್ ಚಂದ್ರ ವರ್ಮಾ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com