ಈ ವರ್ಷದಿಂದ ಸ್ನಾತಕೋತ್ತರ ವೈದ್ಯಕೀಯ ಪ್ರವೇಶಕ್ಕೆ ಸಾಮಾನ್ಯ ಕೌನ್ಸೆಲಿಂಗ್

ಈ ವರ್ಷದಿಂದಲೇ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸಾಮಾನ್ಯ ಕೌನ್ಸೆಲಿಂಗ್ ಇದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ವರ್ಷದಿಂದಲೇ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸಾಮಾನ್ಯ ಕೌನ್ಸೆಲಿಂಗ್ ಇದೆ. ಖಾಸಗಿ ವೈದ್ಯಕೀಯ ಕಾಲೇಜುಗಳು ಸಂಘ ರಾಜ್ಯ ಸರ್ಕಾರದೊಂದಿಗೆ ಸಾಮಾನ್ಯ ಕೌನ್ಸೆಲಿಂಗ್ ನಡೆಸಲು ಒಪ್ಪಿಕೊಂಡಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಕಾಮೆಡ್ ಕೆ ಪ್ರತಿನಿಧಿಗಳು, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಗಳು ಮತ್ತು ಸ್ವಾಯತ್ತ ವಿಶ್ವವಿದ್ಯಾಲಯಗಳು ಸಭೆಯಲ್ಲಿ ಹಾಜರಿದ್ದವು.
ಖಾಸಗಿ ವೈದ್ಯಕೀಯ ಕಾಲೇಜುಗಳ ಅಂಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕೌನ್ಸೆಲಿಂಗ್ ನಡೆಸಲಿದೆ. ಇದೇ 18ರಿಂದ ಪ್ರಕ್ರಿಯೆ ಆರಂಭಗೊಳ್ಳಲಿದೆ. 
ಈ ಸುದ್ದಿಯನ್ನು ಖಚಿತಪಡಿಸಿದ ಕಾಮೆಡ್ ಕೆ ಕಾರ್ಯದರ್ಶಿ ಡಾ.ಕುಮಾರ್, ಸ್ನಾತಕೋತ್ತರ ಸೀಟುಗಳಿಗೆ ಕೇಂದ್ರೀಯ ಕೌನ್ಸೆಲಿಂಗ್ ನಡೆಸಲು ಸರ್ಕಾರದ ಪ್ರಸ್ತಾವನೆಯನ್ನು ನಾವು ಅವಿರೋಧವಾಗಿ ಒಪ್ಪಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾಫ್ಟ್ ವೇರ್ ನ್ನು ಪರಿಶೀಲಿಸಿದ್ದು ಅದರ ಸಾಮರ್ಥ್ಯಗಳ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದರು.
ಕೆಇಎಯ ಕೆಲಸ ದ್ವಿಗುಣಗೊಳ್ಳಲಿದ್ದು, ಈ ಸಂದರ್ಭದಲ್ಲಿ ಅದಕ್ಕೆ ನೆರವು ನೀಡಲು ಕೌನ್ಸೆಲಿಂಗ್ ಸಂದರ್ಭದಲ್ಲಿ ಪ್ರತಿ ಸಂಘಟನೆಯ ಪ್ರತಿನಿಧಿಗಳು ಇರುವಂತೆ ನಿರ್ಧರಿಸಲಾಗಿದೆ.
ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಒಂದೇ ಕೌನ್ಸೆಲಿಂಗ್ ನಡೆಸುವ ಆಯ್ಕೆ ಕಳೆದ ಎರಡು ವರ್ಷಗಳಿಂದ ಸರ್ಕಾರದ ಮುಂದಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು ಇದಕ್ಕೆ ಒಪ್ಪದಿದ್ದ ಕಾರಣ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಸೀಟು ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಸಾಮಾನ್ಯ ಕೌನ್ಸೆಲಿಂಗ್ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇಲ್ಲಿಯವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಕೌನ್ಸೆಲಿಂಗ್ ನಡೆಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com