ಮಹಾರಾಣಿ ಕಾಲೇಜಿನ ಹಾಸ್ಟೆಲ್ ಆವರಣದಲ್ಲಿ ಅಪರಿಚಿತ ವ್ಯಕ್ತಿ ಓಡಾಟ: ಭೀತಿಯಲ್ಲಿ ವಿದ್ಯಾರ್ಥಿನಿಯರು

ಮಹಾರಾಣಿ ಕಾಲೇಜಿನ ಹಾಸ್ಟೆಲ್ ಆವರಣಕ್ಕೆ ರಾತ್ರಿ ಹೊತ್ತಿನಲ್ಲಿ ಬೆತ್ತಲೆಯಾಗಿ ವ್ಯಕ್ತಿಯೊಬ್ಬ ಬರುವುದು ನಿನ್ನೆ ಸದನದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾರಾಣಿ ಕಾಲೇಜಿನ ಹಾಸ್ಟೆಲ್  ಆವರಣಕ್ಕೆ ರಾತ್ರಿ ಹೊತ್ತಿನಲ್ಲಿ ಬೆತ್ತಲೆಯಾಗಿ ವ್ಯಕ್ತಿಯೊಬ್ಬ ಬರುವುದು ನಿನ್ನೆ ಸದನದಲ್ಲಿ ಪ್ರಸ್ತಾಪವಾಯಿತು.
ಕಾಲೇಜು ಮಾತ್ರವಲ್ಲ, ಸುಮಾರು 200 ವಿದ್ಯಾರ್ಥಿನಿಯರು ಉಳಿದುಕೊಳ್ಳುವ ಹಾಸ್ಟೆಲ್ ಕೂಡ ಸುರಕ್ಷಿತವಾಗಿಲ್ಲ. ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ನ ಆವರಣದಲ್ಲಿ ಆಗಾಗ ಬಂದು ಸುಳಿಯುವುದು, ಇಣುಕುವುದು ಮಾಡುತ್ತಿರುವುದು ವಿದ್ಯಾರ್ಥಿನಿಯರಲ್ಲಿ ಭೀತಿಯನ್ನು ಹುಟ್ಟಿಸಿದೆ. ನಿನ್ನೆ ನಗರದ ಮಹಾರಾಣಿ ಕಾಲೇಜಿನ ಹಾಸ್ಟೆಲ್ ನ ಸಿಸಿಟಿವಿ ಕ್ಯಾಮರಾದಲ್ಲಿ ಹಾಸ್ಟೆಲ್ ನ ಹಿಂದುಗಡೆ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಪತ್ತೆಯಾಗಿದೆ.ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಲೈಂಗಿಕ ಕಿರುಕುಳ ತಡೆ ತಜ್ಞರ ಸಮಿತಿ ಸದಸ್ಯರಿಗೆ ವಿಡಿಯೋ ತೋರಿಸಲಾಗಿದೆ.
ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ನಿನ್ನೆ ಸದನದಲ್ಲಿ ಮಾತನಾಡಿ ಸಿಸಿಟಿವಿಯಲ್ಲಿ ಬೆತ್ತಲೆ ವ್ಯಕ್ತಿಯೊಬ್ಬ ಹಾಸ್ಟೆಲ್ ಆವರಣದಲ್ಲಿ ರಾತ್ರಿ ವೇಳೆ ಓಡಾಡುತ್ತಾನೆ. ಈ ವಿಷಯವನ್ನು ನಾನು ಈಗಾಗಲೇ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿನಿಯರು ಈ ಹಿಂದೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ದೂರು ದಾಖಲಿಸಿಕೊಳ್ಳಲಿಲ್ಲವಂತೆ.
ಹಲವು ಸಂದರ್ಭಗಳಲ್ಲಿ ನಮ್ಮ ಬಟ್ಟೆಗಳು ಟೆರೇಸ್ ಮೇಲೆ ಒಣಗಲು ಹಾಕಿದ್ದು ಕಾಣೆಯಾಗಿವೆ. ರೇಸ್ ಕೋರ್ಸ್ ರಸ್ತೆ ಕಡೆಯಿಂದ ಯಾರು ಬೇಕಾದರೂ ನಮ್ಮ ಕ್ಯಾಂಪಸ್ ಪ್ರವೇಶಿಸಬಹುದು. ರಾತ್ರಿ 8 ಗಂಟೆ ಮೇಲೆ ಏನಾದರೂ ತುರ್ತು ಕೆಲಸಗಳಿಗೆ ಹೊರ ಹೋಗಬೇಕೆಂದರೂ ನಮಗೆ ಭೀತಿ ಉಂಟಾಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಶಾಂತ ಕುಮಾರಿ ಅವರನ್ನು ಕೇಳಿದಾಗ, ಒಂದು ವರ್ಷದ ಹಿಂದೆ ಇಂತಹ ಘಟನೆ ನಡೆದಿತ್ತು. ಪೊಲೀಸರಿಗೆ ಸಾಕಷ್ಟು ಬಾರಿ ದೂರು ನೀಡಿದ್ದೆವು. ಆದರೆ ಅವರೇನು ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ.
ಈ ಘಟನೆಯಿಂದಾಗಿ ಕೆಲವು ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com