ಇಲಿ ಪಾಷಾಣ ಮಿಶ್ರಿತ ಆಹಾರ ಸೇವನೆ 3 ಹಾಸ್ಟೆಲ್ ವಿದ್ಯಾರ್ಥಿಗಳ ಸಾವಿಗೆ ಕಾರಣ

ಇಲಿ ಪಾಷಾಣ ಮಿಶ್ರಿತ ಆಹಾರ ಸೇವನೆಯಿಂದ ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿನ ವಿದ್ಯಾವಾರಿಧಿ ಅಂತಾರಾಷ್ಟ್ರೀಯ ಬೋರ್ಡಿಂಗ್ ಶಾಲೆಯ ಮೂವರು...
ವಿದ್ಯಾರ್ಥಿ
ವಿದ್ಯಾರ್ಥಿ
ಬೆಂಗಳೂರು: ಇಲಿ ಪಾಷಾಣ ಮಿಶ್ರಿತ ಆಹಾರ ಸೇವನೆಯಿಂದ ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿನ ವಿದ್ಯಾವಾರಿಧಿ ಅಂತಾರಾಷ್ಟ್ರೀಯ ಬೋರ್ಡಿಂಗ್ ಶಾಲೆಯ ಮೂವರು ವಿದ್ಯಾರ್ಥಿಗಳ ಸಾವು ಸಂಭವಿಸಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಸ್ಪಷ್ಟಪಡಿಸಿದೆ. 
ಬಿಜೆಪಿ ಮಾಜಿ ಶಾಸಕ ಕಿರುಣ್ ಕುಮಾರ್ ಅವರಿಗೆ ಸೇರಿದ ಬೋರ್ಡಿಂಗ್ ಶಾಲೆಯ ಮೂವರು ವಿದ್ಯಾರ್ಥಿಗಳಾದ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಎಂಬುವರು ಮೃತಪಟ್ಟಿದ್ದರು. ಇನ್ನು ಇದೇ ಆಹಾರ ಸೇವಿಸಿದ್ದ ವಸತಿ ಶಾಲೆಯ ಗಾರ್ಡ್ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. 
ಮೃತರಾದ ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ, ಶ್ರೇಯಸ್ ಮತ್ತು ರಮೇಶ್ ಅವರ ಮೃತದೇಹವನ್ನು ಪರೀಕ್ಷಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರಿಗೆ ಅವರ ದೇಹದಲ್ಲಿ ಇಲಿ ಪಾಷಾಣ ಅಂಶವಿರುವುದನ್ನು ಗುರುತಿಸಿದ್ದಾರೆ. 
ಆರಂಭದಲ್ಲಿ ಮೃತ ವಿದ್ಯಾರ್ಥಿಗಳ ಮರಣೋತ್ತರ ಪರೀಕ್ಷೆ ವರದಿಯ ಪ್ರಾಥಮಿಕ ತನಿಖೆಯಿಂದ ಸಾರಿನಲ್ಲಿ ಅಲ್ಯೂಮಿನಿಯಂ ಪ್ರಾಸ್ಪೇಟ್ ಎಂಬ ಕೀಟನಾಶಕ ಬೆರಸಲಾಗಿತ್ತು ಎಂದು ತಿಳಿದಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com