ಮಾಧ್ಯಮಗಳಿಗೆ ಮೂಗುದಾರ ಹಾಕಲು 2 ದಿನದಲ್ಲಿ ಸದನ ಸಮಿತಿ ರಚನೆ: ಕೋಳಿವಾಡ

ರಾಜ್ಯ ವಿಧಾನ ಮಂಡಲದ ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮಾಧ್ಯಮಗಳ ಅದರಲ್ಲೂ ವಿದ್ಯುನ್ಮಾನ...
ಬಜೆಟ್ ನಂತರ ಪತ್ರಿಕೆಗಳ ಶೀರ್ಷಿಕೆ ವೀಕ್ಷಿಸುತ್ತಿರುವ ಸಿಎಂ ಸಿದ್ದರಾಮಯ್ಯ
ಬಜೆಟ್ ನಂತರ ಪತ್ರಿಕೆಗಳ ಶೀರ್ಷಿಕೆ ವೀಕ್ಷಿಸುತ್ತಿರುವ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಅಧಿವೇಶನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮಾಧ್ಯಮಗಳ ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳ ಕಾರ್ಯ ವೈಖರಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಸ್ವೇಚ್ಛಾಚಾರ ತಡೆದು ಮೂಗುದಾರ ಹಾಕಲು ಇನ್ನೆರಡು ದಿನಗಳಲ್ಲಿ ಸದನ ಸಮಿತಿ ರಚಿಸುವುದಾಗಿ ಸ್ಪೀಕರ್ ಕೋಳಿವಾಡ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಕಡಿವಣಾ ಹಾಕಿ, ಸ್ವಾತಂತ್ರ್ಯ ಎತ್ತಿ ಹಿಡಿಯಲು ಈಗಿರುವ ಕಾನೂನು ಬಿಗಿಗೊಳಿಸಬೇಕಾಗಿದೆ. ಈ  ಕಾರ್ಯಕ್ಕೆ ಸದನ ಸಮಿತಿ ರಚಿಸಿ 15 ದಿನದೊಳಗೆ ವರದಿ ನೀಡಲು ಸೂಚಿಸುತ್ತೇವೆ ಎಂದು ಅವರು ಹೇಳಿದ್ದಾರೆ,

ದೃಶ್ಯ ಮಾಧ್ಯಮಗಳು ಶಾಸಕರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂಥ  ಸುದ್ದಿ ಪ್ರಸಾರ ಮಾಡುತ್ತಿವೆ ಎಂಬ ಕುರಿತು ವಿಧಾನಸಭೆಯಲ್ಲಿ 4 ತಾಸು ವಿಸ್ತೃತ ಚರ್ಚೆ ನಡೆಯಿತು. ವಿಧಾನಸಭೆಯ ಕಾರ್ಯಕಲಾಪ ಪಟ್ಟಿಯಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಬಳಿಕ ಬಜೆಟ್‌ ಕುರಿತು ಚರ್ಚೆ ನಿಗದಿಯಾಗಿತ್ತು. ಅದನ್ನು ಬದಿಗೊತ್ತಿದ ಕೋಳಿವಾಡ, ಈ ಚರ್ಚೆಗೆ ಅವಕಾಶ ಕಲ್ಪಿಸಿದರು.

ದೃಶ್ಯಮಾಧ್ಯಮಗಳು ಸ್ವೇಚ್ಛಾಚಾರದಿಂದ ವರ್ತಿಸುತ್ತಿವೆ. ಮುದ್ರಣ ಮಾಧ್ಯಮದ ಕೆಲವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು  ಆರೋಪಿಸಿ  ಅನೇಕ ಸದಸ್ಯರು ವಾಗ್ದಾಳಿ ನಡೆಸಿದರು.

ಎಲೆಕ್ಟ್ರಾನಿಕ್ ಮಾಧ್ಯಮಗಳು ತಮ್ಮ ಟಿಆರ್ ಪಿ ಹೆಚ್ಚಿಸಿಕೊಳ್ಳಲು ರಾಜಕಾರಣಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ಶಾಸಕರಾದ ನಾರಾಯಣ ಸ್ವಾಮಿ, ಎಸ್. ಟಿ ಸೋಮಶೇಖರ್, ಬಿ.ಎ ಮೊಯಿನುದ್ದೀನ್ ಬಾವಾ ವಾಗ್ದಾಳಿ ನಡೆಸಿದರು.

ಇನ್ನೂ ಟಿವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪರಾಧ ಸಂಬಂಧಿತ ಕಾರ್ಯಕ್ರಮಗಳು, ಜ್ಯೋತಿಷ್ಯ,  ಮಕ್ಕಳನ್ನು ದೆವ್ವದ ರೀತಿಯಲ್ಲಿ ತೋರಿಸುವಂತ ಕಾರ್ಯಕ್ರಮಗಳು ಹೆಚ್ಚೆಚ್ಚು ಪ್ರಸಾರ ಆಗುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇಂತಹ ಕಾರ್ಯಕ್ರಮಗಳ ಮೇಲೆ ಸೆನ್ಸಾರ್ ಮಂಡಳಿ ಗಮನ ಇಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಒತ್ತಾಯಿಸಿದ್ದಾರೆ.

ಟಿವಿ ಧಾರಾವಾಹಿಗಳನ್ನು ಸೆನ್ಸಾರ್ ಬೋರ್ಜ್ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರೇ, ಕೆಲ ನಿರೂಪಕರು ತಾವೇ ನ್ಯಾಯಾಧೀಶರ ರೀತ್ ವರ್ತಿಸುತ್ತಾಕೆ ಎಂದು ಎಂ ಎಲ್ ಸಿ ಉಗ್ರಪ್ಪ ಕಿಡಿ ಕಾರಿದರು.

ಟಿ.ವಿ ಜ್ಯೋತಿಷಿ ಮಾತು ಕೇಳಿ ನನ್ನ ಸಹೋದರಿಯ ಮಗಳ ಕುಟುಂಬ ವಿಚ್ಛೇದನ ಹಂತಕ್ಕೆ ಬಂದಿದೆ ಎಂದು ಬಸವರಾಜ ಹೊರಟ್ಟಿ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com