ಐಸಿಎಸ್ಇ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಲೋಪದೋಷ: ಮರು ಪರೀಕ್ಷೆಗೆ ಆಗ್ರಹ

ಐಸಿಎಸ್‌ಇ (ಇಂಡಿಯನ್‌ ಕೌನ್ಸಿಲ್ ಆಫ್‌ ಸೆಕೆಂಡರಿ ಎಜುಕೇಷನ್) ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ವ್ಯಾಕರಣ ಮತ್ತು ಮುದ್ರಣ ದೋಷಗಳು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಐಸಿಎಸ್‌ಇ (ಇಂಡಿಯನ್‌ ಕೌನ್ಸಿಲ್ ಆಫ್‌ ಸೆಕೆಂಡರಿ ಎಜುಕೇಷನ್) ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ವ್ಯಾಕರಣ ಮತ್ತು ಮುದ್ರಣ ದೋಷಗಳು ಕಂಡುಬಂದಿವೆ.

ಐಸಿಎಸ್‌ಇ 10ನೇ ತರಗತಿಯ ದ್ವಿತೀಯ ಭಾಷೆ ಪರೀಕ್ಷೆ ಗುರುವಾರ ನಡೆಯಿತು. ಕನ್ನಡ ಭಾಷೆ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಅಕ್ಷರ ದೋಷಗಳು ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು ಸರಿಯಾಗಿ ಅರ್ಥವಾಗದೆ ಗೊಂದಲಕ್ಕೆ ಒಳಗಾದರು.

ಕೆಲವೊಂದು ಪದಗಳಲ್ಲಿ  ನುನಾಸಿಕ ಹಾಗೂ ಅನುಸ್ವಾರ ಮತ್ತು ಯೋಗವಾಹಕದ ಜತೆಯಲ್ಲಿನ ಪದವೂ ಕಾಣೆಯಾಗಿದೆ. ಪ್ರತಿಯೊಂದು ವಾಕ್ಯದಲ್ಲೂ ಅನೇಕ ತಪ್ಪುಗಳಿದ್ದು, ಪೂರ್ತಿ ಪ್ರಶ್ನೆ ಪತ್ರಿಕೆಯೇ ಗೊಂದಲಕ್ಕೆ ಆಸ್ಪದ ನೀಡುವಂತಿದೆ.

ವ್ಯಾಕರಣ ತಪ್ಪಾಗಿ ಮುದ್ರಿಸಿರುವುದರ ಜೊತೆಗೆ ಪ್ರಿಂಟಿಂಗ್ ಸಮಸ್ಯೆ ಮತ್ತು ಫಾಂಟ್ ಗಳ ಗಾತ್ರದಲ್ಲೂ ವ್ಯತ್ಯಾಸವಾಗಿದೆ. ಪ್ರಶ್ನೆ ಪತ್ರಿಕೆ ಓದಲು 15 ನಿಮಿಷದ ಬದಲು 30 ನಿಮಿಷ ವ್ಯಯಿಸಲಾಗಿದೆ.

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 226 ತಪ್ಪುಗಳು ಆಗಿವೆ ಎಂದು ಪೋಷಕರು ದೂರಿದ್ದಾರೆ. ಕೆಲವೊಂದು ಐತಿಹಾಸಿಕ ಸ್ಥಳಗಳ ಹೆಸರನ್ನು ಸರಿಯಾಗಿ ಮುದ್ರಿಸಿಲ್ಲ, ಹೀಗಾಗಿ ನಮಗೆ ಸ್ಥಳದ ಹೆಸರು ಬರೆಯು ಗೊಂದಲ ಉಂಟಾಯಿತು ಎಂದು ಕೌಸ್ತುಬ್ ಎಂಬ ವಿದ್ಯಾರ್ಥಿ ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆಯಲ್ಲಿ ಹೆಚ್ಚಾಗಿ ತಪ್ಪುಗಳಿದ್ದ ಕಾರಣ ಮರು ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com