ಮೈಸೂರು: ರಾಜಮನೆತನದಿಂದ ಅರಣ್ಯ ಇಲಾಖೆಗೆ ಅರಮನೆ ಆನೆಗಳ ಹಸ್ತಾಂತರ

ಮೈಸೂರು ರಾಜಮನೆತನ ಅರಮನೆಯಲ್ಲಿದ್ದ ಆನೆಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ವಹಿಸಲು ಚಿಂತನೆ ನಡೆಸುತ್ತಿದೆ. ಅರಮನೆಯಲ್ಲಿದ್ದ ಆರು ಆನೆಗಳನ್ನು..
ಪ್ರವಾಸಿಗರಿಂದ ಆನೆ ಮೇಲೆ ಜಾಲಿ ರೈಡ್
ಪ್ರವಾಸಿಗರಿಂದ ಆನೆ ಮೇಲೆ ಜಾಲಿ ರೈಡ್

ಮೈಸೂರು: ಮೈಸೂರು ರಾಜಮನೆತನ ಅರಮನೆಯಲ್ಲಿದ್ದ ಆನೆಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ವಹಿಸಲು ಚಿಂತನೆ ನಡೆಸುತ್ತಿದೆ..

ಅರಮನೆಯಲ್ಲಿದ್ದ ಆರು ಆನೆಗಳನ್ನು ನೋಡಿಕೊಳ್ಳುವುದು ಕಷ್ಟವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ನೀಡಲಾಗುತ್ತಿದೆ ಎಂದು ರಾಜಮನೆತನ ತಿಳಿಸಿದೆ.

ರೂಬಿ,ಸೀತಾ, ಪ್ರೀತಿ, ಚಂಚಲ, ರಾಜೇಶ್ವರಿ, ಮತ್ತು ಜೆಮಿನಿ ಎಂಬ ಹೆಣ್ಣಾನೆಗಳನ್ನು ಅರಣ್ಯಕ್ಕೆ ಕಳುಹಿಸಲಾಗಿದೆ, ಈ ಆನೆಗಳು ಮೊದಲು ಸರ್ಕಸ್ ಕಂಪನಿಯಲ್ಲಿದ್ದವು. ಸದ್ಯದಲ್ಲಿ ಅವುಗಳನ್ನು ಅರಮನೆಯ ಪೂಜಾ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಜೊತೆಗೆ ಅರಮನೆ ಆವರಣದಲ್ಲಿ ಎಲಿಫೆಂಟ್ ರೈಡ್ ಗೂ ಬಳಸಿಕೊಳ್ಳಲಾಗುತ್ತಿತ್ತು. ಅದರಿಂದ ಬಂದ ಹಣವನ್ನು ಅರಸು ಮನೆತನಕ್ಕೆ ಕೊಡಲಾಗುತ್ತಿತ್ತು.

ಆನೆಗಳ ನಿರ್ವಹಣಾ ವೆಚ್ಚ ಅಧಿಕವಾದ ಹಿನ್ನೆಲೆ ಹಾಗೂ ಅವುಗಳ ಆರೋಗ್ಯ ಸಮಸ್ಯೆಯಿಂದಾಗಿ ಈ ಆನೆಗಳನ್ನು ಅರಣ್ಯ ಇಲಾಖೆಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅದರಲ್ಲೂ ಹೆಣ್ಣಾನೆಗಳನ್ನು ನಿಯಂತ್ರಣ ಮಾಡುವುದು ತುಂಬಾ ಕಷ್ಟದ ಕೆಲಸ ಎಂದು ಅರಮನೆ ಮೂಲಗಳು ತಿಳಿಸಿವೆ. ದಸರಾ ವೇಳೆ ಕಾಡಿನಿಂದ ಬರುವ ಆನೆಗಳ ಜೊತ,  ಅಂದರೆ ವರ್ಷಕ್ಕೆ ಒಮ್ಮೆ ಮಾತ್ರ ಈ ಆನೆಗಳಿಗೆ ಮಿಲನಕ್ಕೆ ಅವಕಾಶ ಇರುತ್ತದೆ.

ಮೂರು ಆನೆಗಳನ್ನು ಅರಣ್ಯ ಇಲಾಖೆಗೆ ನೀಡಿ ಉಳಿದವುಗಳನ್ನು ಅಂದರೆ ಸೌಮ್ಯ ಸ್ವಭಾವದ ರೂಬಿ, ಸೀತಾ ಮತ್ತು ಪ್ರೀತಿ ಆನೆಗಳನ್ನು ಅರಮನೆಯಲ್ಲಿಯೇ  ಉಳಿಸಿಕೊಳ್ಳಲು ರಾಜಮನೆತೆನ ಯೋಜಿಸಿದೆ, ಚಂಚಲಾ, ರಾಜೇಶ್ವರಿ ಮತ್ತು ಜೆಮಿನಿ ಆನೆಗಳನ್ನು ಅರಣ್ಯಕ್ಕೆ ನೀಡಲು ಚಿಂತಿಸಲಾಗಿದೆ.

ಒಂದು ತಿಂಗಳ ಹಿಂದೆ ಆರಮನೆಯ ಪ್ರತಿನಿಧಿಯೊಬ್ಬರು ಡಿಸಿಎಫ್ ಕರಿಕಾಳನ್ ಅವರನ್ನು ಭೇಟಿ ಮಾಡಿ ಅನೆಗಳ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com