ಆರ್ ಟಿಇ ಕಾಯ್ದೆ: ಹಿಂತಿರುಗಿಸುವ ಮಕ್ಕಳ ಶಾಲಾ ವಾರ್ಷಿಕ ಶುಲ್ಕ ಏರಿಕೆ; ಹೈಕೋರ್ಟ್ ಗೆ ಸರ್ಕಾರ ಪ್ರಕಟಣೆ ಸಲ್ಲಿಕೆ

ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಿಕ್ಷಣ  ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರಗತಿಗಳಿಗೆ ಪ್ರವೇಶಾತಿ ಪಡೆದ ಮಕ್ಕಳಿಗೆ ಹಿಂತಿರುಗಿಸುವ ವಾರ್ಷಿಕ ಶುಲ್ಕವನ್ನು ಪರಿಷ್ಕೃತಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ನಿನ್ನೆ ಹೈಕೋರ್ಟ್ ಗೆ ತಿಳಿಸಿದೆ.
ಮಾರ್ಚ್ 23ರಂದು ಹೊರಡಿಸಿದ ಅಧಿಸೂಚನೆಯನ್ನು  ಹೈಕೋರ್ಟ್ ಗೆ ಇತ್ತೀಚೆಗೆ ಸಲ್ಲಿಸಿರುವ ರಾಜ್ಯ ಸರ್ಕಾರ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಶಿಕ್ಷಣ  ಹಕ್ಕು ಕಾಯ್ದೆಯಡಿ ಪ್ರತಿ ಮಕ್ಕಳಿಗೆ ಸರ್ಕಾರ ವರ್ಷಕ್ಕೆ ಕಟ್ಟುವ ಶುಲ್ಕವನ್ನು 11,848 ರೂಪಾಯಿಗಳಿಂದ 16,000ಕ್ಕೆ ಈ ವರ್ಷದಿಂದ ಹೆಚ್ಚಳ ಮಾಡಿದೆ.
ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಾರ್ಷಿಕ ಶುಲ್ಕವನ್ನು 5,924ರಿಂದ 8,000ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಖಾಸಗಿ ಶಾಲೆಗಳಲ್ಲಿ ಕಲಿಯುವ ಆರ್ ಟಿಇಯಡಿ ದಾಖಲಾದ ಮಕ್ಕಳ ಶುಲ್ಕವನ್ನು ಕೂಡ ಪರಿಷ್ಕೃತಗೊಳಿಸಲು ಸೂಚಿಸಲಾಗಿದೆ. 
ಸರ್ಕಾರ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಬಿ ಹಿಂಚಿಗೆರೆ ಮತ್ತು ಕೆ.ಎಸ್.ಮುದಗಲ್ ಅವರನ್ನೊಳಗೊಂಡ ವಿಭಾಗೀಯ ಪೀಠ,ಸರ್ಕಾರದಿಂದ ಗುರುತಿಸಲ್ಪಟ್ಟ ಇಂಗ್ಲಿಷ್ ಮಾಧ್ಯಮ ಶಾಲೆಗಳ ವ್ಯವಸ್ಥಾಪಕ ಒಕ್ಕೂಟ ಸಲ್ಲಿಸಿದ ನಿಂದನಾ ಅರ್ಜಿಯ ವಿಲೇವಾರಿ ಮಾಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com