ಸುಸೂತ್ರವಾಗಿ ಮುಗಿದ ಪಿಯುಸಿ ಪರೀಕ್ಷೆ: ಇಲಾಖೆ ನಿರ್ದೇಶಕಿಗೆ ಧನ್ಯವಾದ ಪತ್ರಗಳ ಮಹಾಪೂರ

ಯಾವುದೇ ತೊಂದರೆ, ಅಡ್ಡಿ ಆತಂಕಗಳಿಲ್ಲದೇ ಪಿಯುಸಿ ಪರೀಕ್ಷೆ ಮುಗಿದಿದೆ. ಕಳೆದ ಬಾರಿಯಂತೆ ಈ ಸಲ ಎಲ್ಲಿಯೂ ಯಾವುದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರಲಿಲ್ಲ, ...
ಪದವಿಪೂರ್ವ ಶಿಕ್ಷಣ ಇಲಾಖೆ  ನಿರ್ದೇಶಕಿ ಸಿ. ಶಿಖಾ
ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ

ಬೆಂಗಳೂರು: ಯಾವುದೇ ತೊಂದರೆ, ಅಡ್ಡಿ ಆತಂಕಗಳಿಲ್ಲದೇ ಪಿಯುಸಿ ಪರೀಕ್ಷೆ ಮುಗಿದಿದೆ. ಕಳೆದ ಬಾರಿಯಂತೆ ಈ ಸಲ ಎಲ್ಲಿಯೂ ಯಾವುದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರಲಿಲ್ಲ, ಇದು ಸಹಜವಾಗಿ ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದಕ್ಕೆ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಅವರಿಗೆ ವಿದ್ಯಾರ್ಥಿಗಳು, ಪೋಷಕರು, ಹಾಗೂ ಸಿಬ್ಬಂದಿ ವರ್ಗ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ.

ಪಿಯುಸಿಯ ಅಂತಿಮ ಪರೀಕ್ಷೆ ಮುಗಿದ ಮಾರನೇ ದಿನದಿಂದ ಪತ್ರಗಳು ಬರುವುದಕ್ಕೆ ಆರಂಭವಾಗಿವೆ, ಹೆಚ್ಚಾಗಿ ವಿಜ್ಞಾನ  ವಿದ್ಯಾರ್ಥಿಗಳಿಂದ ಪತ್ರ ಬಂದಿವೆ.

ನಾವು ನಿಜವಾಗಿಯೂ ನಿಮಗೆ ಆಭಾರಿಯಾಗಿದ್ದೇವೆ ಮೇಡಮ್,  ಪರೀಕ್ಷೆ ನಡೆದ ರೀತಿ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಎಲ್ಲಿಯೂ ಸುಳ್ಳು ಸುದ್ದಿ ಹಬ್ಬಲಿಲ್ಲ, ನನ್ನ ಕೆಮಿಸ್ಟ್ರಿ ಪರೀಕ್ಷೆ ಮುಗಿದ ನಂತರ ನಾನು ಈ ಪತ್ರ ಬರೆಯುತ್ತಿದ್ದೇನೆ, ಈ ಇದೊಂದು ದಾರಿಯಲ್ಲಿ ಮಾತ್ರ ನಾನು ನಿಮಗೆ ಧನ್ಯವಾದ ಸಲ್ಲಿಸಬಹುದು, ಈ ಬಾರಿಯೂ ಲಕ್ಷಾಂತರ ವಿದ್ಯಾರ್ಥಿಗಳಿಲ್ಲಿದ್ದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಹುದೆಂಬ ಭಯವನ್ನು ನೀವು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದು ಧನ್ಯವಾದ ಹೇಳಿದ್ದಾಳೆ. ಕಳೆದ ವರ್ಷ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com