ಈ ವರ್ಷದಿಂದ ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ ಆನ್ ಲೈನ್ ನಲ್ಲಿ ಲಭ್ಯ

ಈ ವರ್ಷದಿಂದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಈ ವರ್ಷದಿಂದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಅಂಕಪಟ್ಟಿಗಳು ಸಿಗುತ್ತವೆ. ನಕಲಿ ಅಂಕಪಟ್ಟಿ ಹಾವಳಿ ಮತ್ತು ಶಾಲಾ ಕಾಲೇಜುಗಳಲ್ಲಿ ಅಂಕಪಟ್ಟಿಗಳು ನೀಡುವಾಗ ವಿಳಂಬವಾಗುವುದನ್ನು ತಡೆಗಟ್ಟಲು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನು ಆನ್ ಲೈನ್ ನಲ್ಲಿ ನೀಡಲು ಮುಂದಾಗಿದೆ.
ಮೊನ್ನೆ ಸೋಮವಾರ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್ ಸೈಟ್ ಗಳಲ್ಲಿ ಅಂಕಪಟ್ಟಿಗಳನ್ನು ಅಪ್ ಲೋಡ್ ಮಾಡುವ ಕುರಿತು ಚರ್ಚೆ ನಡೆಸಿದರು.  ವಿದ್ಯಾರ್ಥಿಗಳು ತಮ್ಮ ದಾಖಲಾತಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ವೆಬ್ ಸೈಟ್ ನಲ್ಲಿ ದಾಖಲಿಸಿದರೆ ಅಂಕಪಟ್ಟಿ ಸಿಗುತ್ತದೆ.
ಅಂಕಪಟ್ಟಿಯಲ್ಲಿ ಏನಾದರೂ ತಪ್ಪು ಕಂಡುಬಂದರೆ ತಿದ್ದುವಿಕೆಗೆ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಬಹುದು. ನಂತರ ತಿದ್ದಿದ ಅಂಕಪಟ್ಟಿ ಸಿಗುತ್ತದೆ. ಈ ವರ್ಷ ಪ್ರಥಮ ಬಾರಿಯಾಗಿರುವುದರಿಂದ ಅಂಕಪಟ್ಟಿ ಆಫ್ ಲೈನ್ ನಲ್ಲಿ ಕೂಡ ಸಿಗುತ್ತದೆ. ಅಂಕಪಟ್ಟಿಯ ಹಾರ್ಡ್ ಪ್ರತಿಗಳು ಬೇಕೆಂದವರು ಶಾಲೆ, ಕಾಲೇಜು ಮುಖಾಂತರ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com