ತುಮಕೂರು: ದಲಿತ ಕುಟುಂಬಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ

ಜಿಲ್ಲೆಯ ಕುರಿಪಾಳ್ಯದಲ್ಲಿ 15 ದಲಿತ ಕುಟುಂಬಗಳ ಮೇಲೆ ನೆಡದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ,...
ಸೊಗಡು ಶಿವಣ್ಣ
ಸೊಗಡು ಶಿವಣ್ಣ

ತುಮಕೂರು: ಜಿಲ್ಲೆಯ ಕುರಿಪಾಳ್ಯದಲ್ಲಿ 15 ದಲಿತ ಕುಟುಂಬಗಳ ಮೇಲೆ ನೆಡದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ,

ಯುಗಾದಿ ಹಬ್ಬದ ದಿನ ದಲಿತ ಗುಂಪೊಂದು ಜೂಜಾಡುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಮುಸ್ಲಿಂ ಗುಂಪೊಂದು ತಮ್ಮನ್ನು ಜೂಜಾಡುವುದಕ್ಕೆ ಸೇರಿಸಿಕೊಳ್ಳಲು ಆಗ್ರಹಿಸಿದಾಗ ದಲಿತ ಗುಂಪು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಂಮರ ತಂಡವೊಂದು 15 ದಲಿತು ಕುಟುಂಬಗಳ ಮನೆ ಮೇಲೆ ದಾಳಿ ನಡೆಸಿ ಕಿಟಕಿ, ಬಾಗಿಲುಗಳನ್ನು ಧ್ವಂಸ ಮಾಡಿತ್ತು.

ಮಾಜಿ ಸಚಿವ ಸೊಗಡು ಶಿವಣ್ಣ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಜೊತೆ ಚರ್ಚೆ ನಡೆಸಿದ್ದಾರೆ. 4 ಬಾರಿ ಶಾಸಕರಾಗಿದ್ದ ಶಿವಣ್ಣ 2 ಸಲ ತಮ್ಮ ಹಿಂದುತ್ವದ ನಿಲುವಿನ ಮೇಲೆ ಆಯ್ಕೆಯಾಗಿದ್ದರು. ಹಿಂದೂಗಳ ಮೇಲೆ ದಾಳಿ ಮಾಡಿದರೇ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಲ್ಪ ಸಂಖ್ಯಾತ ಸಮುದಾಯಕ್ಕೆ ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.

ದಲಿತರ ಮೇಲೆ ಹಲ್ಲೆ ಮಾಡಿರುವ ಸೈಯ್ಯದ್ ಮತ್ತು ರಫೀಕ್  ಶಾಸಕ ಡಾ. ರಫೀಕ್ ಅಹ್ಮದ್ ಅವರ ಬೆಂಬಲಿಗರು ಎಂದು ಸೊಗಡು ಶಿವಣ್ಣ ಆರೋಪಿಸಿದ್ದಾರೆ.

ಸೊಗಡು ಶಿವಣ್ಣ ಅವರ ಬದ್ಧ ವೈರಿ ಎಂದೇ ಬಿಂಬಿತವಾಗಿರುವ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ.ಎಸ್ ಬಸವರಾಜು ಅವರ ಪುತ್ರ ಜಿ.ಬಿ ಜ್ಯೋತಿಗಣೇಶ್ ಪ್ರತಿಕ್ರಿಯಿಸಿ, ಹಲ್ಲೆ ನಡೆಸಿದ ದುಷ್ಕರ್ಮಿಗಳು ಹಮಾರಾ ಆದ್ಮಿ ಎಂಬ ಕಾರ್ಡ್ ಬಳಸಿದ್ದಾರೆ, ಈ ಘಟನೆ ಹಿಂದೆ ಶಾಸಕ ರಫೀಕ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ಘಟನೆ ಸಂಬಂಧ ಇದುವರೆಗೂ 15 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ವಿವಿಧ ಕಲಂ ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ಇಶಾ  ಪಂಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com