ಸಂಜೆ ವೇಳೆ ಸಂಚರಿಸಲಿದೆ ಬೆಂಗಳೂರು-ಮೈಸೂರು ನಡುವೆ ಹೊಸ ರೈಲು

ದಿನ ನಿತ್ಯ ಕೆಲಸ ಮುಗಿಸಿ ಸಂಜೆ ವೇಳೆ ಮನೆಗೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಪ್ರತಿದಿನ ಬೆಂಗಳೂರು-ಮೈಸೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ದಿನ ನಿತ್ಯ ಕೆಲಸ ಮುಗಿಸಿ ಸಂಜೆ ವೇಳೆ ಮನೆಗೆ ಪ್ರಯಾಣಿಸುವ ರೈಲು ಪ್ರಯಾಣಿಕರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಪ್ರತಿದಿನ ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ  ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಧಿಕ ಪ್ರಯಾಣಿಕರು ತುಂಬಿರುತ್ತಾರೆ.
ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗಿಸುವ ದೃಷ್ಟಿಯಲ್ಲಿ ಸೌತ್ ವೆಸ್ಟರ್ನ್ ರೈಲ್ವೇ ಶೀಘ್ರದಲ್ಲಿ ಎರಡು ನಗರಗಳ ನಡುವೆ ಹೊಸ ರೈಲನ್ನು ಪರಿಚಯಸಿಲಿದೆ, ಸರ್ಕಾರಿ ನೌಕರರು, ಗಾರ್ಮೆಂಟ್ಸ್ ಕಾರ್ಮಿಕರು ಮೈಸೂರಿನಿಂದ ಪ್ರತಿದಿನ ಸಂಜೆ 6.15 ಕ್ಕೆ ಪ್ರಯಾಣಿಸಬಹುದು.
ಹೊಸ ರೈಲು ಚಾಮುಂಡಿ ಎಕ್ಸ್ ಪ್ರೆಸ್ ಗೆ ಪೂರಕವಾಗಲಿದೆ. ಹೆಚ್ಚು ಕಡಿಮೆ ಎರಡು ರೈಲುಗಳ ಸಂಚಾರ ಸಮಯ ಒಂದೇ ಆಗಿರಲಿದೆ. ಈ ಯೋಜನೆಯನ್ನು ನಾವು ಬಹಳ ಹಿಂದೆಯೇ ನಿರ್ಧರಿಸಿದ್ದೆವು, ಆದರೆ ನಮ್ಮ ವಿಭಾಗದಲ್ಲಿ ರೇಕ್ಸ್ ಕೊರತೆಯಿಂದ ವಿಳಂಬವಾಯಿತು ಎಂದು ಹುಬ್ಬಳ್ಳಿ ಎಸ್ ಡಬ್ಲ್ಯೂಆರ್ ನ ಮುಖ್ಯ ಪಿಆರ್ ಓ ಇ ವಿಜಯ ಹೇಳಿದ್ದಾರೆ.
ಚಾಮುಂಡಿ ಎಕ್ಸ್ ಪ್ರೆ ಸ್ ಪ್ರತಿದಿನ ಸಂಜೆ 6.15 ಕ್ಕೆ ಕೆಎಸ್ ಆರ್ ನಿಲ್ದಾಣದಿಂದ ಹೊರಟು ರಾತ್ರಿ 9 ಗಂಟೆ 5 ನಿಮಿಷಕ್ಕೆ ಮೈಸೂರು ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ. ಪರಿಚಯಿಸಲಿರುವ ಹೊಸ ರೈಲು ಸಂಜೆ 5.50ಕ್ಕೆ ಕೆಎಸ್ ಆರ್ ರೈಲು ನಿಲ್ದಾಣದಿಂದ ಹೊರಟು ರಾತ್ರಿ 8.50ಕ್ಕೆ ಮೈಸೂರು ತಲುಪುತ್ತದೆ.
ಎರಡು ನಗರಗಳ ನಡುವೆ ಸುಮಾರು 19 ರೈಲುಗಳು ಸಂಚರಿಸುತ್ತವೆ. ಅದರಲ್ಲಿ 7 ರೈಲುಗಳು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11.55 ರವರೆಗೆ ಸಂಚರಿಸುತ್ತವೆ. ಚಾಮುಂಡಿ ಎಕ್ಸ್ ಪ್ರೆಸ್ ರೈಲು ಸಂಚಾರ ವೇಳೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅನುಕೂಲಕವಾಗುವ ಸಮಯಕ್ಕೆ ಸಂಚರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com