ಆನೆಕಲ್: 3 ವರ್ಷದ ಮಗನ ಶವವನ್ನು ಬೈಕ್ ನಲ್ಲಿ ಸಾಗಿಸಿದ ಅಸಹಾಯಕ ತಂದೆ!

ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮೂರು ವರ್ಷದ ಮಗುವಿನ ಶವವನ್ನು ಅಸಾಹಯಕ ತಂದೆಯೊಬ್ಬ ದ್ವಿಚಕ್ರ ವಾಹನದಲ್ಲಿ ಸಾಗಿಸಿದ ಘಟನೆ ಬೆಂಗಳೂರಿನ ..
ಆ್ಯಂಬುಲೆನ್ಸ್
ಆ್ಯಂಬುಲೆನ್ಸ್
ಬೆಂಗಳೂರು: ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮೂರು ವರ್ಷದ ಮಗುವಿನ ಶವವನ್ನು ಅಸಾಹಯಕ ತಂದೆಯೊಬ್ಬ ದ್ವಿಚಕ್ರ ವಾಹನದಲ್ಲಿ ಸಾಗಿಸಿದ ಘಟನೆ ಬೆಂಗಳೂರಿನ ಹೊರವಲಯ ಆನೆಕಲ್ ನಲ್ಲಿ ಜರುಗಿದೆ. 
ಭಾನುವಾರ ಸಂಜೆ ಆನೆಕಲ್ ನ ಕಾರ್ಪುರ್ ಗೇಟ್ ನಲ್ಲಿ ಬಾಲಕನಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು, ಅಸ್ಸಾಂ ಮೂಲದ ವಲಸೆ ಕಾರ್ಮಿಕನಾಗಿದ್ದ ಬಾಲಕನ ತಂದೆ ಬಾಲಕನನ್ನು ಕೂಡಲೇ ಆನೇರಲ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾನೆ, ಆದರೆ ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿದ್ದಾದ್ದಾಗಿ ಘೋಷಿಸಿದರು. ಹೀಗಾಗಿ ಬಾಲಕನ ತಂದೆ ಮಗುವಿನ ಶವವನ್ನು ಬೇಕ್ ನಲ್ಲಿ ಸಾಗಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು ಆಸ್ಪತ್ರೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆದರೆ ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದೆ, ತಮ್ಮ ಕಡೆಯಿಂದ ಯಾವ ತಪ್ಪು ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಬಾಲಕನ ತಂದೆ ಶವವನ್ನು ಮರಣೋತ್ತರ ಪರಿಕ್ಷೆಗೂ ಕಳುಹಿಸಿದೇ ವಾಪಸ್ ತೆಗೆದು ಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.
ವಿಷಯ ತಿಳಿದ ಕೂಡಲೇ ನಾವು ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಶವವನ್ನು ಕೊಂಡೊಯ್ಯಲು ಪೋಷಕರನ್ನು ಹುಡುಕಾಡಿದೆವು ಆದರೆ ಅಲ್ಲಿ ಅವರು ಇರಲಿಲ್ಲ ಎಂದು ಆಸ್ಪತ್ರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಆ್ಯಂಬುಲೆನ್ಸ್ ಕೇಳಿಲ್ಲ, ಅದಕ್ಕೆ ನೀಡಲು ನಮ್ಮ ಬಳಿ ಹಣವಿರಲಿಲ್ಲ ಎಂದು ಬಾಲಕನ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಬಾಲಕ ಮೃತ ಪಟ್ಟಿರುವುದಾಗಿ ವೈದ್ಯರು ಹೇಳಿದರು. ಹೀಗಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಮ್ಮ ಮನೆಗೆ ನಾವು ವಾಪಸ್ ಶವವನ್ನು ತಂದೆವು, ನಂತರ ಬಂದ ಪೊಲೀಸರು ಶವವನ್ನು ಕೊಂಡೊಯ್ದರು ಎಂದು ಬಾಲಕನ ಸಂಬಂಧಿ ತಿಳಿಸಿದ್ದಾರೆ.
ನಾವು ಬಡವರು, ಆ್ಯಂಬುಲೆನ್ಸ್ ಗೆ ಹಣ ಹೊಂದಿಸಲು ನಮ್ಮಿಂದ ಸಾಧ್ಯವಿಲ್ಲ, ಹೀಗಾಗಿ ನಾವು ಅಲ್ಲಿಂದ ಹೊರಟೆವು ಎಂದು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತ ನಡೆಸಿದವರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.ಮಹಿಳೆ ಮತ್ತು ಮಕ್ಕಳ ಹಿತರಕ್ಷಣಾ  ಸಮಿತಿ ಸದಸ್ಯರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com