ಮೈಸೂರು: ಮುಜರಾಯಿ ದೇವಾಲಯಗಳ ಮುಂದೆ 'ಎಲ್ಲರಿಗೂ ಮುಕ್ತ ಪ್ರವೇಶ' ಫಲಕ ಕಡ್ಡಾಯ

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮೈಸೂರು ಜಿಲ್ಲೆಯ ಎಲ್ಲಾ ದೇವಾಲಯಗಳ ಪ್ರವೇಶ ದ್ವಾರದಲ್ಲಿ ಇನ್ನುಮಂದೆ ಹೊಸದೊಂದು ಫಲಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಮೈಸೂರು ಜಿಲ್ಲೆಯ ಎಲ್ಲಾ ದೇವಾಲಯಗಳ ಪ್ರವೇಶ ದ್ವಾರದಲ್ಲಿ ಇನ್ನುಮಂದೆ ಹೊಸದೊಂದು ಫಲಕ ಕಾಣಲಿದೆ.
ಎಲ್ಲರಿಗೂ ಮುಕ್ತ ಪ್ರವೇಶ ಎಂಬ ಫಲಕವನ್ನು ದೇವಾಲಯಗಳ ಮುಂಭಾಗ ಹಾಕಬೇಕೆಂದು ಜಿಲ್ಲಾಧಿಕಾರಿ ಡಿ. ರಣ್ ದೀಪ್ ಕಠಿಣ ಆದೇಶ ಹೊರಡಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ ದೇವಾಸ್ಥಾನಗಳಲ್ಲಿ ಗಂಡು-ಹೆಣ್ಣು, ಜಾತಿ ಮತ ನೋಡದೇ ಎಲ್ಲರಿಗೂ ದೇವಾಲಯ ಪ್ರವೇಶ ನೀಡಬೇಕು. ಈ ಹಿನ್ನೆಲೆಯಲ್ಲಿ ಪ್ರವೇಶ ಫಲಕ ಕಡ್ಡಾಯಗೊಳಿಸಬೇಕೆಂದು ಆದೇಶಿಸಿದ್ದಾರೆ. ಮೇ- 20 ರೊಳಗೆ ಫಲಕ ಅಡವಳಿಕೆಗೆ ಗಡುವು ನೀಡಲಾಗಿದೆ.
ಹನಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿನ ದೇವಾಲಯಕ್ಕೆ ಪ್ರವೇಶ ನೀಡುತ್ತಿಲ್ಲ ಎಂದು ಕೆಲ ದಲಿತರು ದೂರು ನೀಡಿದ್ದರು. ಹಲವು ದೇವಾಲಯಗಳಲ್ಲಿ ಇಂದಿಗೂ ದಲಿತರಿಗೆ ಪ್ರವೇಶ ನೀಡುತ್ತಿಲ್ಲ. ಈ ಸಂಬಂದ ಎಸ್ ಸಿ ಎಸ್ಟಿ ಮಾನಿಟರಿಂಗ್ ಕಮಿಟಿ ದಲಿತ ಸಂಘಟನೆಗಳೊಂದಿಗೆ ಚರ್ಚಿಸಿ ವಿಷಯವನ್ನು ಜಿಲ್ಲಾಧಿಕಾರಿಗೆ ತಲುಪಿಸಿದ್ದಾರೆ.
ಕೆಲವು ದೇವಾಲಯಗಳಲ್ಲಿ ಕೆಳ ವರ್ಗದ ಜನರಿಗೆ ಪ್ರವೇಶ ನೀಡುತ್ತಿರಲಿಲ್ಲ. ಈ ಕೆಟ್ಟ ಪದ್ಧತಿಯನ್ನು ನಿರ್ಮೂಲನ ಮಾಡಲು, ಎಲ್ಲರಿಗೂ ದೇವಾಲಯ ಪ್ರವೇಶಕ್ಕೆ ಅನುಮತಿ ಎಂಬ ಫಲಕ ಕಡ್ಡಾಯವಾಗಿ ಹಾಕಬೇಕೆಂದು ಜಿಲ್ಲಾಘಿಕಾರಿ ಈ ಆದೇಶ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com