ಹಾವೇರಿ: ಬ್ಯಾಡಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರು ತೆಗೆಸಿದ್ದ ಬೋರ್ ವೆಲ್ ನಲ್ಲಿ ನೀರು ಸಿಗದೆ ಖಿನ್ನತೆಗೆ ಒಳಗಾಗಿದ್ದರು.
ಶಾಂತಪ್ಪ ಶೇಖಪ್ಪ ಪುಟ್ಟಣ್ಣವರ್(62) ಬ್ಯಾಂಕಿನಲ್ಲಿ 3 ಲಕ್ಷ ಹಾಗೂ ಖಾಸಗಿ ವ್ಯಕ್ತಿಗಳ ಬಳಿ 2 ಲಕ್ಷ ರೂಪಾಯಿ ಸಾಲ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸುತ್ತವೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಕೋಲಾರ ತಾಲ್ಲೂಕಿನ ರೈತರೊಬ್ಬರು ಕಳೆದ ತಿಂಗಳು 13ರಂದು ಬಾವಿಗೆ ಹಾರಿ ಮೃತಪಟ್ಟಿದ್ದರು. ಆತ್ಮಹತ್ಯೆ ಮಾಡುವುದಕ್ಕೆ ಮುನ್ನಾ ದಿನ ಸಾಲ ಕಟ್ಟುವಂತೆ ಬ್ಯಾಂಕಿನಿಂದ ಅವರಿಗೆ ನೊಟೀಸ್ ಬಂದಿತ್ತು.
ನಾರಾಯಣಪ್ಪ ಮತ್ತು ಕುಟುಂಬದವರಿಗೆ 12 ಎಕರೆ ಜಮೀನು ಇತ್ತು. ಕೃಷಿಗೆಂದು 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು.