ಸ್ವಂತ ಖರ್ಚಿನಿಂದಲೇ ವಿದ್ಯಾರ್ಥಿ ವೇತನದ ಬಗ್ಗೆ ಜಾಗೃತಿ ಮೂಡಿಸಿ, ನೆರವಾಗುತ್ತಿರುವ 75 ವರ್ಷದ ಕೆ ನಾರಾಯಣ ನಾಯ್ಕ್

ನಿವೃತ್ತಿಯ ಜೀವನದಲ್ಲಿಯೂ ಮತ್ತೊಬ್ಬರಿಗೆ ಸಹಾಯ ಮಾಡುವ ಜನರು ವಿರಳ. ಆದರೆ ಇದಕ್ಕೆ ಅಪವಾದವೆಂಬಂತಿದ್ದಾರೆ 75 ವರ್ಷದ ಕೆ. ನಾರಾಯಣ ನಾಯ್ಕ್.
ನಾರಾಯಣ ನಾಯ್ಕ್
ನಾರಾಯಣ ನಾಯ್ಕ್
ಮಂಗಳೂರು: ನಿವೃತ್ತಿಯ ಜೀವನದಲ್ಲಿಯೂ ಮತ್ತೊಬ್ಬರಿಗೆ ಸಹಾಯ ಮಾಡುವ ಜನರು ವಿರಳ. ಆದರೆ ಇದಕ್ಕೆ ಅಪವಾದವೆಂಬಂತಿದ್ದಾರೆ 75 ವರ್ಷದ ಕೆ. ನಾರಾಯಣ ನಾಯ್ಕ್.
ಶಾಲಾ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಕೆ. ನಾರಾಯಣ ನಾಯ್ಕ್ ನಿವೃತ್ತರಾಗಿದ್ದು 2001 ರಲ್ಲಿ. ನಿವೃತ್ತರಾಗಿ 16 ವರ್ಷಗಳೇ ಕಳೆದಿದ್ದರು ಇಂದಿಗೂ ಸಹ ವಿದ್ಯಾರ್ಥಿಗಳಿಗೆ ನೆರವಾಗುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಈ ದಣಿವರಿಯದ ಶ್ರಮದಿಂದಲೇ ಇಂದು ಅದೆಷ್ಟೋ ನೂರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. 
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೆರವು ಬೇಕಿರುವ ವಿದ್ಯಾರ್ಥಿಗಳಿವೆ ವಿದ್ಯಾರ್ಥಿ ವೇತನ ನೀಡುವ ಯೋಜನೆಗಳನ್ನು ಹೊಂದಿರುತ್ತವೆ. ಆದರೆ ಈ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪಷ್ಟ ಮಾಹಿತಿ ಇರುವುದಿಲ್ಲ. ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಲು, ಜಾಗೃತಿ ಮೂಡಿಸಲು ಕೆ. ನಾರಾಯಣ ನಾಯ್ಕ್ ಸ್ವಂತ ಖರ್ಚಿನಿಂದಲೇ ಉಡುಪಿಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾರೆ. ಈ ಮೂಲಕ ಅರ್ಹ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯುವುದಕ್ಕೆ ಸಹಾಯ ಮಾಡುತ್ತಾರೆ. 
ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ವಿದ್ಯಾರ್ಥಿಗಳಿಗೆ ನೆರವಾಗಲು ಹಲವಾರು ವಿದ್ಯಾರ್ಥಿ ವೇತನಗಳಿವೆ. ಆದರೆ ಈ ಬಗ್ಗೆ ಅರಿವಿನ ಕೊರತೆ ಇದೆ ಎನ್ನುತ್ತಾರೆ ಕೆ ನಾರಾಯಣ ನಾಯ್ಕ್. ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಗ್ಗೆ ಮಾಹಿತಿ ನೀಡುವುದರಿಂದ ಕೆ ನಾರಾಯಣ ನಾಯ್ಕ್ ಅವರು ಸ್ಕಾಲರ್ ಶಿಪ್ ಮಾಸ್ಟರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. 
ನಮ್ಮ ಸ್ಜಾಲರ್ ಶಿಪ್ ಮಾಸ್ಟರ್ ಮಾಹಿತಿ ನೀಡುವುದರೊಂದಿಗೆ ಅರ್ಜಿ ತುಂಬುವುದಕ್ಕೂ ಸಹಾಯ ಮಾಡಲಿದ್ದು, ಕಾಲೇಜಿನಿಂದ ಓದು ಮುಕ್ತಾಯಗೊಳಿಸಿದವರಿಗೆ ಚೆಕ್ ತಲುಪಿಸುವುದಕ್ಕೂ ಸಹಾಯ ಮಾಡುತ್ತಾರೆ ಎನ್ನುತ್ತಾರೆ ಬಿಕಾಂ ವಿದ್ಯಾರ್ಥಿನಿ ನಿಶಾಂ. 2016 ರಲ್ಲಿ ನಾಯ್ಕ್ ಅವರು ಸುಮಾರು 130 ಸರ್ಕಾರಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದು, ಕಾರ್ಮಿಕರ ಮಕ್ಕಳ ಓದಿಗೂ ನೆರವಾಗಿದ್ದಾರೆ. 
ಸ್ಕಾಲರ್ ಶಿಪ್ ಬಗ್ಗೆ ಮಾಹಿತಿ ನೀಡುವುದಷೇ ಅಲ್ಲದೇ ಶಾಲೆಗಳಲ್ಲಿ ಕಾರ್ಪಸ್ ನಿಧಿ ಸ್ಥಾಪನೆಗೂ ನಾಯ್ಕ್ ನೆರವಾಗಿದ್ದು, ಬಂಟ್ವಾಳದ ಕೊಯಿಲಾ ಶಾಲೆಗೆ ಪ್ರಾರಂಭಿಕ 26,000 ರೂ ಮೊತ್ತದ ಕಾರ್ಪಸ್ ಫಂಡ್ ಪ್ರಾರಂಭಕ್ಕೂ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ನೆರವಿನಿಂದ ಬಲ್ಮಟ್ಟದಲ್ಲಿರುವ ಸರ್ಕಾರಿ ಕಾಲೇಜುಗಳಿಗೆ ವಾರ್ಷಿಕ 50-60 ಲಕ್ಷ ರೂ ವಿದ್ಯಾರ್ಥಿ ವೇತನದ ಸಹಾಯ ದೊರೆತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com