ಬೆಂಗಳೂರು ದರ್ಶಿನಿ ಬಸ್ ನಲ್ಲಿ ದುಬಾರಿ ಪ್ರಯಾಣ ದರ: ಕುಗ್ಗಿದ ಪ್ರಯಾಣಿಕರ ಸಂಖ್ಯೆ

ಪ್ರವಾಸಿಗರಿಗಾಗಿಯೇ ಪ್ರಾರಂಭಿಸಲಾಗಿರುವ ಬೆಂಗಳೂರು ದರ್ಶಿನಿ (ಬೆಂಗಳೂರು ರೌಂಡ್ಸ್) ಬಸ್ ಸೇವೆಗೆ ಜನಪ್ರಿಯತೆ ಕುಗ್ಗುತ್ತಿದ್ದು, ದುಬಾರಿ ಪ್ರಯಾಣ ದರ ಹಾಗೂ ಕ್ಯಾಬ್ ಗಳು ನೀಡುತ್ತಿರುವ ಪೈಪೋಟಿ ...
ಬೆಂಗಳೂರು ದರ್ಶಿನಿ
ಬೆಂಗಳೂರು ದರ್ಶಿನಿ
ಬೆಂಗಳೂರು: ಪ್ರವಾಸಿಗರಿಗಾಗಿಯೇ ಪ್ರಾರಂಭಿಸಲಾಗಿರುವ ಬೆಂಗಳೂರು ದರ್ಶಿನಿ (ಬೆಂಗಳೂರು ರೌಂಡ್ಸ್) ಬಸ್ ಸೇವೆಗೆ ಜನಪ್ರಿಯತೆ ಕುಗ್ಗುತ್ತಿದ್ದು, ದುಬಾರಿ ಪ್ರಯಾಣ ದರ ಹಾಗೂ ಕ್ಯಾಬ್ ಗಳು ನೀಡುತ್ತಿರುವ ಪೈಪೋಟಿ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. 
ಬೆಂಗಳೂರು ದರ್ಶಿನಿ ಬಸ್ ನಲ್ಲಿ ವಯಸ್ಕರಿಗೆ 400 ರೂಪಾಯಿ ಟಿಕೆಟ್ ದರ ಇದ್ದರೆ 300 ರೂಪಾಯಿ ಮಕ್ಕಳಿಗೆ ಟಿಕೆಟ್ ಇದ್ದು ಪ್ರತಿ ತಿಂಗಳು ಬೆಂಗಳೂರು ದರ್ಶಿನಿ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ ಸರಾಸರಿ 300 ರಷ್ಟಿದ್ದು. 42 ಆಸನವಿರುವ ಬಸ್ ನಲ್ಲಿ ಪ್ರತಿದಿನ ಕೇವಲ 10 ಮಂದಿ ಪ್ರಯಾಣಿಕರು ಸಂಚರಿಸುತ್ತಾರೆ. 
ಬೆಂಗಳೂರಿನ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳನ್ನು ಪ್ರವಾಸಿಗರಿಗೆ ತೋರಿಸುವ ಉದ್ದೇಶದಿಂದ ಬೆಂಗಳೂರು ದರ್ಶಿನಿ ಬಸ್ ಸೇವೆಯನ್ನು ಉದ್ಘಾಟಿಸಲಾಗಿತ್ತು. ಬೆಳಿಗ್ಗೆ 8:30 ರ ವೇಳೆಗೆ ಪ್ರಯಾಣಿಕರನ್ನು ಮೆಜಸ್ಟಿಕ್ ನಿಂದ ಕರೆದೊಯ್ದು, ಸಂಜೆ 6:00 ಗಂಟೆ ವೇಳೆಗೆ ವಾಪಸ್ ಕರೆದೊಯ್ಯಲಿದೆ. ಆದರೆ ಸ್ಥಳೀಯ ಕ್ಯಾಬ್ ಗಳು ಆಕರ್ಷಕ ಪ್ರಯಾಣ ದರದ ಮೂಲಕ ಹೆಚ್ಚಿನ ಪೈಪೋಟಿ ನೀಡುತ್ತಿದ್ದು, ಬೆಂಗಳೂರು ದರ್ಶಿನಿ ಬಸ್ ಸೇವೆಯನ್ನು ಬಳಕೆ ಮಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ. 
ಈ ಹಿಂದೆ ಬಿಎಂಟಿಸಿಯ ಹೋಪ್ ಆನ್ ಹೋಪ್ ಆಫ್ ಸರ್ವೀಸ್ ಗಳು ಕಡಿಮೆ ಪ್ರಯಾಣ ದರದಲ್ಲಿ ಇದೇ ಸೌಲಭ್ಯ ಒದಗಿಸಿ 20 ಐತಿಹಾಸಿಕ ಪ್ರದೇಶಗಳಿಗೆ ಪ್ರವಾಸಿಗರನ್ನು ತಲುಪಿಸುತ್ತಿತ್ತು. ಆದರೆ ಬೆಂಗಳೂರು ದರ್ಶಿನಿಯ ಸೇವೆ ದುಬಾರಿಯಾಗುವುದರೊಂದಿಗೆ ಕರೆದೊಯ್ಯಲಾಗುವ ಐತಿಹಾಸಿಕ ಪ್ರದೇಶಗಳೂ ಸಹ ಕಡಿಮೆಯಾಗಿದ್ದು, ಪ್ರಯಾಣಿಕರನ್ನು, ಪ್ರವಾಸಿಗರನ್ನು ಆಕರ್ಷಿಸಲು ಬಿಎಂಟಿಸಿ ವಿಫಲವಾಗಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಅಷ್ಟೇ ಅಲ್ಲದೇ ಬಿಎಂಟಿಸಿ ಜಾಹಿರಾತುಗಳನ್ನು ನೀಡುವ ಮೂಲಕ ಬೆಂಗಳೂರು ದರ್ಶಿನಿ ಸೌಲಭ್ಯದ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕೆಂಬ ಅಭಿಪ್ರಾಯವೂ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com