ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಮುಗಿದಿಲ್ಲ: ದಾವಣಗೆರೆಯ ಗ್ಯಾಂಗ್ ರೇಪ್ ಸಂತ್ರಸ್ತೆ ಆಕ್ರೋಶ

ನವದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ ನಡೆದ ದಿನ ಡಿಸೆಂಬರ್ 17, 2012 ರಂದು ದಾವಣಗೆರೆಯಲ್ಲಿ ಡಿಪ್ಲಮೋ ವಿದ್ಯಾರ್ಥಿನಿ ಮೇಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನವದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣ  ನಡೆದ ದಿನ ಡಿಸೆಂಬರ್ 17, 2012 ರಂದು ದಾವಣಗೆರೆಯಲ್ಲಿ ಡಿಪ್ಲಮೋ ವಿದ್ಯಾರ್ಥಿನಿ ಮೇಲೆ  ಸಾಮೂಹಿಕ ಅತ್ಯಾಚಾರ ನಡೆದಿತ್ತು. 
ಪ್ರಕರಣ ನಡೆದು ಸುಮಾರು 5 ವರ್ಷಗಳೇ ಆಗಿದೆ, ಆದರೆ ಸಂತ್ರಸ್ತೆಗೆ ಎಲ್ಲೆಡೆಯೂ ಬರಿ ವಿರೋಧಗಳೇ ವ್ಯಕ್ತವಾಗಿವೆ, ದುರಂತ ನಡೆದ ಮೇಲೆ ಆಕೆ ಮನೆ ಬಿಡಬೇಕಾಯಿತು, ಕೋರ್ಟ್ ವಿಚಾರಣೆಗಾಗಿ ತನ್ನ ಕೆಲಸ ಕಳೆದುಕೊಳ್ಳಬೇಕಾಯಿತು. ಆಗಿದ್ದರೂ ಇಂದು ಕೂಟ ಆಕೆ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾಳೆ. ಅತ್ಯಾಚಾರ ಮಾಡಿ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಮುಂದಿನ ವರ್ಷ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಡಿಸೆಂಬರ್ 17 2012 ರಂದು ಯುವತಿ ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ಗೆ ಕಾಯುತ್ತಿದ್ದಳು. ಸಂಜೆ 6.30 ಸಮಯವಾದರೂ ಯಾವುದೇ ಬಸ್ ಬರುವ ಸೂಚನೆ ಸಿಗಲಿಲ್ಲ. ಆ ವೇಳೆ ಬಂದ ಮಿನಿ ಟೆಂಪೊಗೆ ಯುವತಿ ಹತ್ತಿದಳು. ಟೆಂಪೋದಲ್ಲಿ ಡ್ರೈವರ್ ಸೇರಿ ನಾಲ್ವರು ವ್ಯಕ್ತಿಗಳಿದ್ದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಟೆಂಪೋ ಡ್ರೈವರ್ ಟೆಂಪೋ ನಿಲ್ಲಿಸಿದ. ಅವರು ಬಲವಂತವಾಗಿ ನನ್ನನ್ನು ಪಕ್ಕದಲ್ಲಿದ್ದ ಮೈದಾನಕ್ಕೆ ಎಳೆದುಕೊಂಡು ಹೋದರು,  ತನಗೆ ಏನು ಮಾಡದಿರುವಂತೆ ಅವರಲ್ಲಿ ಬೇಡಿಕೊಂಡೆ, ಆದರೆ  ಕ್ರೂರಿಗಳಿಗೆ ಮನಸ್ಸು ಕರಗಲಿಲ್ಲ, ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ನನ್ನನ್ನು ಊರಿನ ಹೊರಗೆ ಬಿಟ್ಟು ಹೋದರು.
ಮನೆಗೆ ಬಂದ ನಾನು ತಾಯಿಯ ಜೊತೆ ಎಲ್ಲಾ ವಿಷಯವನ್ನು ಹೇಳಿದೆ. ಆದರೆ ಪೊಲೀಸರಿಗೆ ದೂರು ಕೊಡುವುದು ಬೇಡ ಎಂದು ತಾಯಿ ತಿಳಿಸಿದರು, ಇದನ್ನೆ ಬಂಡವಾಳ ಮಾಡಿಕೊಂಡ ಕಾಮುಕರು ಮತ್ತೆ ಎರಡು ವಾರಗಳ ನಂತರ ನನ್ನನ್ನು ಹಿಂಬಾಲಿಸಲು ಆರಂಭಿಸಿದರು. ಅನಂತರ ನಾನು ಪೊಲೀಸರಿಗೆ ದೂರು ನೀಡಲು ನಿರ್ದರಿಸಿದೆ, ಜನವರಿ 30 2013 ರಂದು ದೂರು ದಾಖಲಿಸಿದೆ ಎಂದು ಸಂತ್ರಸ್ತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರಾಜ, ರಾಘವೇಂದ್ರ, ಸಂತೋಷ ಮತ್ತು ರಾಘು ಎಂಬುವರನ್ನು ಬಂಧಿಸಿದರು, ಅವರ ಕುಟುಂಬದ ಸದಸ್ಯಸರು ಪದೇ ಪದೇ ನಮ್ಮ ಮನೆಗೆ ಬಂದು ರಾಜಿಯಾಗುವಂತೆ ಕೇಳಿಕೊಂಡರು. ಆದರೆ ಬದಲಾದ ಕಾಲಘಟ್ಟದಲ್ಲಿ ನಾನು ಬಲವಂತವಾಗಿ ಮನೆ ಬಿಟ್ಟು ಬರುವಂತಾಯಿತು. ಸಹೋದರಿಯರ ಮದುವೆಗೆ ಕಷ್ಟವಾಗುತ್ತದೆಂದು ನಾನು ಊರನ್ನು ತೊರೆದು ಬೆಂಗಳೂರು ಸೇರಿದೆ, 
ಒಂದು ಜೊತೆ ಬಟ್ಟೆ ಚಪ್ಪಲಿಯೂ ಇಲ್ಲದೇ ನಾನು ಮನೆಯಿಂದ ಹೊರಬಿದ್ದೆ.  ಟಿಕೆಟ್ ಇಲ್ಲದೇ ಪ್ರಯಾಣಿಸಿದರೇ ಜೈಲಿಗೆ ಹೋಗಬಹುದು, ಜೈಲಿನಲ್ಲಿ ಊಟವಾದರೂ ಸಿಗುತ್ತದೆ ಎಂಬ ಭರವಸೆಯಿಂದ ವಾರಗಟ್ಟಲೇ ನಾನು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದೆ. ಆದರೆ ಯಾರು ನನ್ನನ್ನು ಹಿಡಿಯಲಿಲ್ಲ. ನಂತರ ನನ್ನ ಫ್ರೆಂಡ್ ನನಗೆ ಆಶ್ರಯ ನೀಡಿದರು. ನಂತರ ನಾನು ಬೆಂಗಳೂರಿಗೆ ಬಂದು ವೈಟ್ ಫೀಲ್ಡ್ ನ ಮಾಲ್ ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆದರೆ ದಾವಣೆಗೆರೆಯಲ್ಲಿ ವಿಚಾರಣೆಗಾಗಿ ಕೋರ್ಟ್ ಗೆ ಹಾಜರಾಗಬೇಕಾಗ ಕಾರಣ ರಜೆ ತೆಗೆದುಕೊಂಡ ಹಿನ್ನೆಲೆಯಲ್ಲಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದರು.
ಪ್ರಕರಣ ದಾಖಲಾದ ನಂತರ ಜಿಲ್ಲಾಡಳಿತ ನನಗೆ 60 ಸಾವಿರ ರು. ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ ನನಗೆ ಸಿಂಪಥಿ ಹಣ ಬೇಡವೆಂದು ನಾನು ಅದನ್ನು ತಿರಸ್ಕರಿಸಿದೆ. ಆದರೆ  ನನ್ನ ವಿದ್ಯಾಭ್ಯಾಸ ಮುಂದುವರಿಸಲು ನನಗೆ ಹಣಕಾಸಿನ ಸಹಾಯದ ಅವಶ್ಯಕತೆ ಇದೆ ಎಂದು ಈಗ ನನಗೆ ಅನಿಸುತ್ತಿದೆ ಎಂದು ಆಕೆ ತಿಳಿಸಿದ್ದಾಳೆ.
ನಿರ್ಭಯಾ ಫಂಡ್ ಗಾಗಿ ನಾನು ಹಲವು ಇಲಾಖೆಗಳನ್ನು ಸಂಪರ್ಕಿಸಿದೆ. ಆದರೆ ಸಹಾಯ ನೀಡುವ ಭರವಸೆ ಸಿಕ್ಕಿತೇ ಹೊರತು ಹಣ ಸಿಗಲಿಲ್ಲ. ಭವಿಷ್ಯದಲ್ಲಿ ಪೋಷಕರ ಜೊತೆ ಮತ್ತೆ ಜೀವನ ನಡೆಸುವ ವಿಶ್ವಾಸವಿದೆ, ಆಗಾಗ್ಗೆ ನನ್ನ ತಾಯಿಯನ್ನು ಭೇಟಿ ಮಾಡುತ್ತೇನೆ ಎಂದು ಆಕೆ ತಿಳಿಸಿದ್ದಾಳೆ,
ಆರು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳು ಮುಂದಿನ ವರ್ಷ| ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ ಆದಂತೆ ಇವರಿಗೂ ಶಿಕ್ಷೆಯಾಗಬೇಕು ಹೀಗಾಗಿ ನಾನು ಮತ್ತೆ ಉನ್ನತ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾಳೆ.
ಒಂದು ವೇಳೆ ನಾನು ಕೇಸು ದಾಖಲಿಸದಿದ್ದರೇ ಇನ್ನೂ ಹಲವು ಹೆಣ್ಣುಮಕ್ಕಳು ಕಾಮುಕರಿಗೆ ಬಲಿಯಾಗುತ್ತಿದ್ದರು. ನನಗೆ ಬಂದಂತ ಸ್ಥಿತಿ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ನಾನು ಪ್ರಕರಣ ದಾಖಲಿಸಿದೆ ಎಂದು ಆಕೆ ತಿಳಿಸಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com