ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉದ್ದೇಶಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ 2 ಲಕ್ಷ ಮರಗಳ ಮಾರಣಹೋಮ?

ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಾರವಾರ ಮತ್ತು ಯಲ್ಲಾಪುರ ವಿಭಾಗಗಳಲ್ಲಿ 2 ಲಕ್ಷ ಮರಗಳನ್ನು ಬಲಿ ನೀಡಬೇಕಾಗುತ್ತದೆ ಎಂದು ಮೂವರು ...
Published on
ಬೆಂಗಳೂರು: ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಾರವಾರ ಮತ್ತು ಯಲ್ಲಾಪುರ ವಿಭಾಗಗಳಲ್ಲಿ 2 ಲಕ್ಷ ಮರಗಳನ್ನು ಬಲಿ ನೀಡಬೇಕಾಗುತ್ತದೆ ಎಂದು ಮೂವರು ಸದಸ್ಯರನ್ನೊಳಗೊಂಡ ಸಮಿತಿ ವರದಿ ಸಲ್ಲಿಸಿದೆ. 2016 ರಲ್ಲಿ ನಡೆಸಿದ ಮಾದರಿ ಸಮೀಕ್ಷೆಯವರದಿ ಇದಾಗಿದೆ.
ಧಾರವಾಡ ವಿಭಾಗದಲ್ಲಿ ಉದರ ಅಂದಾಜು ಮಾಡಬೇಕಾಗಿದೆ. ರಾಷ್ಟ್ರೀಯ ಹಸಿರು ಮಂಡಳಿ ನಿರ್ದೇಶನದ ಮೇರೆಗೆ ಅರಣ್ಯ ಮತ್ತು ಪರಿಸರ ಸಚಿವಾಲಯದ ಪ್ರಾದೇಶಿಕ ಕಚೇರಿ ಫೆಬ್ರವರಿ 19 2016 ರಂದು ಸಮಿತಿ ರಚಿಸಿತ್ತು.ಮತ್ತೊಮ್ಮೆ ಪರಿಶೀಲಿಸಿ ರೈಲುಮಾರ್ಗ ನಿರ್ಮಾಣದ ಪ್ರಸ್ತಾವನೆ ಇಡಬೇಕು ಎಂದು ಅರಣ್ಯ ಮತ್ತು ಪರಿಸರ ಇಲಾಖೆಗೆ ಸೂಚಿಸಿತ್ತು. ಇದು 2005 ರಲ್ಲಿ ನಡೆಸಿದ ಪರಿಶೀಲನೆಯಾಗಿದ್ದು ಮತ್ತೆ ಈ ಹೊಸದಾಗಿ ಮೂರು ವಿಭಾಗಗಳ ಪರಿಶೀಲನೆ ನಡೆಸಬೇಕಾಗಿದೆ. 
ಪರಿಶೀಲನೆ ನಡೆಸಿದ ಸಮಿತಿ 168.28 ಕಿಮೀ ಉದ್ದದ ಬ್ರಾಡ್ ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ 595.64 ಎಕರೆ ಭೂಮಿ ಅವಶ್ಯಕತೆಯಿದ್ದು, ಇದರಲ್ಲಿ ಅರಣ್ಯಭೂಮಿಯನ್ನು ಕೂಡ ಬಳಕೆ ಮಾಡಿಕೊಳ್ಳಲಾಗುತ್ತದೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯನಾಶವಾಗಿ ಪಶ್ಚಿಮಘಾಟ್ ಗಳಲ್ಲಿ ವನ್ಯಜೀವಿ ಸಂಕುಲಕ್ಕೆ ಮಾರಕವಾಗುತ್ತದೆ ಎಂದು ಹೇಳಿದೆ.
ರೈಲು ಮಾರ್ಗ ನಿರ್ಮಾಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮರ ಕತ್ತರಿಸಬೇಕಾಗುತ್ತೆದೆ.ಇದರಿಂದ ಪಶ್ಚಿಮ ಘಾಟ್ ನಲ್ಲಿ ಅತಿ ದಟ್ಟ ಅರಣ್ಯ ಎಂದು ಹೆಸರುವಾಸಿಯಾಗಿರುವ ಯಲ್ಲಾಪುರ ಮತ್ತು ಕಾರವಾರದ ಕಾಡಿಗೆ ಈ ಯೋಜನೆಯಿಂದ ಕಾಡಿಗೆ ತೊಂದರೆ ಉಂಮಟಾಗುತ್ತದೆ ಎಂದವರದಿಯಲ್ಲಿ ತಿಳಿಸಲಾಗಿದೆ.
ಉದ್ದೇಶಿತ ರೈಲು ನಿರ್ಮಾಣಕ್ಕಾಗಿ 34 ಸುರಂಗಳು ಮತ್ತು 9 ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಬೇಕರಾಗುತ್ತದೆ. ಇದಕ್ಕೆ ಈಗಾಗಲೇ ನಿಗದಿ ಪಡಿಸಿರುವ ಭೂಮಿಯಲ್ಲದೇ ಹೆಚ್ಚಿನ ಅರಣ್ಯ ಭೂಮಿ ಅವಶ್ಯಕತೆ ಇರುತ್ತದೆ ಎಂದು ಹೇಳಿದೆ.
ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಸಾಗಣಗೆಗಾಗಿ ಈ ರೈಲು ಮಾರ್ಗ ಯೋಜನೆ ಪ್ರಸ್ತಾಪಿಸಲಾಗಿದೆ. ಆದರೆ ಇದುವರೆಗೂ ರಾಷ್ಟ್ರೀಯ ಹೆದ್ದಾರಿ-64ರಲ್ಲಿ ಹೆಚ್ಚಿನ ಪ್ರಮಾಣದ ಲಾರಿಗಳು ಸಂಚರಿಸುತ್ತಿಲ್ಲ, ಪರಿಸ್ಥಿತಿ ಹೀಗಿರುವಾಗ ಇದಕ್ಕೆ ಪರ್ಯಾಯವಾದ ರೈಲು ಮಾರ್ಗ ನಿರ್ಮಾಣದ ಅವಶ್ಯಕತೆ ಇದೆಯೇ ಎಂದು ಸಮಿತಿ ಪ್ರಶ್ನಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com