ಬೆಂಗಳೂರು: ಯುವ ಕಾದಂಬರಿಕಾರ ಕೆಎಸ್ ಸುಪ್ರೀತ್ ಅವರ ತರ್ಕ ಕಾದಂಬರಿ ಮೇ.14 ರಂದು ಬಿಡುಗಡೆಯಾಗಲಿದೆ.
ಎನ್ಆರ್ ಕಾಲೋನಿಯಲ್ಲಿರುವ ಬಿಎಂ ಶ್ರೀ ಸ್ಮಾರಕ ಪ್ರತಿಷ್ಠಾನದಲ್ಲಿ ಸಂಜೆ 4.00 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತರ್ಕ ಕಾದಂಬರಿ ಹಾಗೂ ಈರಪ್ಪ ಮಹಾಲಿಂಗಪೂರ ಅವರ ಸ್ಪರ್ಧಾ ಶ್ರೇಯಸ್ಸು (ಪದವಿ ಪೂರ್ವ ಕನ್ನಡ ಉಪನ್ಯಾಸಕರ ಪರೀಕ್ಷಾ ಕೈಪಿಡಿ) ಬಿಡುಗಡೆಯಾಗಲಿದೆ.
ಅಂಕಣಕಾರ, ಖ್ಯಾತ ಲೇಖಕ ರೋಹಿತ್ ಚಕ್ರತೀರ್ಥ ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದು, ವಿವೇಕ ಹಂಸ ಮಾಸಪತ್ರಿಕೆಯ ಸಂಪಾದಕ ವಿ.ರಘು ಕೃತಿಗಳ ಪರಿಚಯ ಮಾಡಿಕೊಡಲಿದ್ದಾರೆ. ಉಪನ್ಯಾಸಕ, ಹವ್ಯಾಸಿ ಬರಹಗಾರರಾದ ಶಿವಕುಮಾರ್ ಮಾವಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.