ಮೈಸೂರು: ದಲಿತ ಕುಟುಂಬಕ್ಕೆ 8 ತಿಂಗಳು ಸಾಮಾಜಿಕ ಬಹಿಷ್ಕಾರ

ಕುಟುಂಬದ ಸದಸ್ಯನೊಬ್ಬ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಎಚ್.ಡಿ ಕೋಟೆ ತಾಲೂಕಿನ ಹೊಮ್ಮರಗಹಳ್ಳಿ ಗ್ರಾಮದ ದಲಿತ ..
ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಮಬ
ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಮಬ
ಮೈಸೂರು: ಕುಟುಂಬದ ಸದಸ್ಯನೊಬ್ಬ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಎಚ್.ಡಿ ಕೋಟೆ ತಾಲೂಕಿನ ಹೊಮ್ಮರಗಹಳ್ಳಿ ಗ್ರಾಮದ ದಲಿತ ಕುಟುಂಬಕ್ಕೆ 8 ತಿಂಗಳು ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಕೃಷಿ ಕಾರ್ಮಿಕ ದೊಡ್ಡಯ್ಯ ಎಂಬಾತನ ಕುಟುಂಬದ ಸದಸ್ಯರಿಗೆ ನೀರು ಕೊಡಲು ನಿರಾಕರಿಸಿದ್ದಾರೆ, ಸಾರ್ವಜನಿಕ ಆರೋಗ್ಯ ಮತ್ತು ಉದ್ಯೋಗ ನೀಡುವುದನ್ನು ನಿಲ್ಲಿಸಿದ್ದಾರೆ.
ಊರಿನ ಹಿರಿಯರಾದ ದಲಿತರು ಕೂಡ ದೊಡ್ಡಯ್ಯ ಅವರ ಕುಟುಂಬಸ್ಥರಿಗೆ ಬಹಿಷ್ಕಾರ ಹಾಕಿದ್ದಾರೆ. ಪಕ್ಕದ ಊರಿನಲ್ಲಿರುವ ದೊಡ್ಡಯ್ಯ ಸೋದರಳಿಯರಿಬ್ಬರು ಅದೇ ಊರಿನ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಕೊಲೆ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಇದಕ್ಕೆ ತೃಪ್ತರಾಗದ ಊರಿನ ಹಿರಿಯರು ಆರೋಪಿಗಳ ಕುಟುಂಬಕ್ಕೆ ಐದು ಲಕ್ಷ ರು ದಂಡ ವಿಧಿಸಿ, ಅದನ್ನು ಕೊಲೆಯಾದವನ ಕುಟುಂಬಸ್ಥರಿಗೆ ನೀಡುವಂತೆ ಶಿಕ್ಷೆ ವಿಧಿಸಿದ್ದಾರೆ. ಆದರೆ ಅಷ್ಟು ಹಣವನ್ನು ನೀಡಲು ನಾವು ಶಕ್ತರಿಲ್ಲ ಎಂದು ದೊಡ್ಡಯ್ಯ ಕುಟುಂಬ ಹೇಳಿದ ಹಿನ್ನೆಲೆಯಲ್ಲಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಸಾಮಾಜಿಕ ಬಹಿಷ್ಕಾರದ ವಿರುದ್ಧ ದೊಡ್ಡಯ್ಯ ತಾಯಿ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಪೊಲೀಸರು ಗ್ರಾಮದಲ್ಲಿ ಶಾಂತಿ ಮಾತಪಕತೆ ನಡೆಸಲು ಪ್ರಯತ್ನಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ  ಎಸ್ ಪಿ ಡಿ . ರವಿ ಚನ್ನಣ್ಣನವರ್ ಇದುವರೆಗೂ ಸಾಮಾಜಿಕ ಬಹಿಷ್ಕಾರದ ಬಗ್ಗೆ ಯಾವುದೇ ದೂರು ಬಂದಿಲ್ಲ, ಮಹಿಳೆಯೊಬ್ಬರು ಮೌಖಿಕವಾಗಿ ವಿಷಯ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com