ಮೈಸೂರು : 900 ವರ್ಷದ ಜಲಾಶಯ ಪುನರ್ ನಿರ್ಮಾಣಕ್ಕೆ ಸರ್ಕಾರದ ನಿರ್ಧಾರ

ಸತತ ಬರಗಾಲ ಮತ್ತು ಜಲಾಶಯದಲ್ಲಿ ಕುಸಿದ ನೀರಿನ ಮಟ್ಟದಿಂದಾಗಿ ಕಾವೇರಿ ನದಿ ಪಾತ್ರದ ನೀರಾವರಿ ಮತ್ತು ಬೆಂಗಳೂರು ಸೇರಿದಂತೆ ಇತರ ನಗರಗಳ ..
ಮಾಧವ ಮಂತ್ರಿ ಜಲಾಶಯ
ಮಾಧವ ಮಂತ್ರಿ ಜಲಾಶಯ
Updated on
ಮೈಸೂರು: ಸತತ ಬರಗಾಲ ಮತ್ತು ಜಲಾಶಯದಲ್ಲಿ ಕುಸಿದ ನೀರಿನ ಮಟ್ಟದಿಂದಾಗಿ ಕಾವೇರಿ ನದಿ ಪಾತ್ರದ ನೀರಾವರಿ ಮತ್ತು ಬೆಂಗಳೂರು ಸೇರಿದಂತೆ ಇತರ ನಗರಗಳ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರಿದೆ. ಹೀಗಾಗಿ 900 ವರ್ಷಗಳಷ್ಟು ಹಳೇಯದಾದ ಮಾಧವ ಮಂತ್ರಿ ಜಲಾಶಯವನ್ನು ಪುನರ್ ನಿರ್ಮಾಣ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಮಾಧವ ಮಂತ್ರಿ ಜಲಾಶಯ ಪುನರ್ ನಿರ್ಮಾಣ ಮಾಡುವುದರಿಂದ ಅದರಲ್ಲಿ ನೀರು ಸಂಗ್ರಹಿಸಿ ಕುಡಿಯುವ ನೀರಿಗೆ ಉಂಟಾಗುವ ಬವಣೆ ತಪ್ಪಿಸಬಹುದು.
ಕಳೆದ ಎರಡು ವರ್ಷಗಳ ಹಿಂದೆ ಮಾಧವ ಮಂತ್ರಿ ಜಲಾಶಯವನ್ನು 1140 ರಲ್ಲಿ  ಬಂಡೆಗಳು ಮರಳು ಮತ್ತುಸುಣ್ಣದ ಕಲ್ಲು ಬಳಸಿ ನಿರ್ಮಿಸಲಾಗಿತ್ತು. ಈಗ ಮತ್ತದೇ ಸಾಮಾಗ್ರಿಗಳನ್ನು ಬಳಸಿಕೊಂಡು ಪುನರ್ ನಿರ್ಮಿಸಲಾಗುತ್ತದೆ. 
ಮಳವಳ್ಳಿ ತಾಲೂಕಿನ 56 ಗ್ರಾಮಗಳಿಗೆ ಹಾಗೂ 30 ಸಾವಿರ ಎಕರೆ ಜಮೀನಿಗೆ ಮಾಧವಮಂತ್ರಿ ಜಲಾಶಯದಿಂದಲೇ ನೀರು ಪೂರೈಕೆಯಾಗುತ್ತದೆ. ಟಿ. ನರಸೀಪುರ ಮತ್ತು ಬೆಳಗವಾಡಿ ಹಾಗೂ ಹೆಮ್ಮಿಗೆಯ ಜಲ ವಿದ್ಯುತ್ ಯೋಜನೆಗೆ  ಮಡುಕುತೊರೆಯಿಂದ ನೀರು ಹರಿಸಲಾಗುತ್ತದೆ.
ಸರ್ಕಾರ 70 ಕೋಟಿ ರು ವೆಚ್ಚದಲ್ಲಿ ಮಾಧವ ಮಂತ್ರಿ ಜಲಾಶಯ ಪುನರ್ ನಿರ್ಮಾಣಕ್ಕಾಗಿ ಸಮಗ್ರ ಯೋಜನೆ ವಿವರ ತಯಾರಿಸಿದ್ದು, ಟೆಂಡರ್ ಆಹ್ವಾನಿಸಿದೆ. ಜೊತೆಗೆ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಸರ್ಕಾರಗ ದಂಗೆರೆ ಜಹಾಗೀರ್ ದಾರ್ ಜಲಾಶಯವನ್ನು ಕೂಡ ಅಭಿವೃದ್ಧಿಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ನೀರಾವರಿ ಇಲಾಖೆ ಮಾಧವಮಂತ್ರಿ ಜಲಾಶಯದ ಎದಡಂಡೆ ನೀರಾವರಿ ಕಾಲುವೆಯನ್ನು ಆಧುನೀಕರಣಗೊಳಿಸಿದ್ದು ಪ್ರತಿಯೊಬ್ಬ ರೈತರಿಗೂ ನೀರು ಹರಿಸುವ ಭರವಸೆ ನೀಡಿದೆ.
ಕೆಆರ್ ಎಸ್ ಜಲಾಶಯ ಸಂಪೂರ್ಣ ಬರಿದಾಗಿದ್ದು, ಅಧಿಕಾರಿಗಳು ಸ್ಲೂಯಿಸ್ ಗೇಟ್ ಗಳನ್ನು ರಿಸೆಟ್ ಮಾಡುತ್ತಿದ್ದಾರೆ, ಕಬಿನಿ ಅಚ್ಚುಕಟ್ಟು ಪ್ರದೇಶದ ಉಲ್ಲಹಳ್ಳಿ  ಮತ್ತು ರಾಂಪುರ ಕಾಲುವೆಗಳ ಆಧುನೀಕರಣ ಕಾಮಗಾರಿ ಕೂಡ ನಡೆಸುತ್ತಿದ್ದಾರೆ.
ಮಾಧವ ಮಂತ್ರಿ ಜಲಾಶಯವನ್ನು ಪುನರ್ ನಿರ್ಮಾಣ ಮಾಡಲು ಬದ್ದರಾಗಿದ್ದು, ತಲಕಾಡು ಮತ್ತು ಟಿ. ನರಸೀಪುರ ಗಳ ಹನಿ ಮತ್ತು ತುಂತುರು ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com