ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಜೂನ್ ನಿಂದ ಚೂಡಿದಾರ್ ಭಾಗ್ಯ

ಜ್ಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ಕರ್ಟ್ ಗೆ ಬದಲಾಗಿ ಸಲ್ವಾರ್ ಕಮೀಜ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ಕರ್ಟ್ ಗೆ ಬದಲಾಗಿ ಸಲ್ವಾರ್ ಕಮೀಜ್ ಸಮವಸ್ತ್ರ ವಿತರಿಸಲಾಗುವುದು.
ವಿದ್ಯಾರ್ಥಿನಿಯರಿಗೆ ಸಮವಸ್ತ್ರವಾಗಿ ನೀಲಿ ಮತ್ತು ಗಾಢ ನೀಲಿ ಬಣ್ಣದ ಚೂಡಿದಾರ್ ನೀಡಲಾಗುವುದು. ಹೊಸ ಸಮವಸ್ತ್ರವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 8ರಿಂದ 10ನೇ ತರಗತಿಯಲ್ಲಿ ಒಟ್ಟು 8.5 ಲಕ್ಷ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 
ಕಳೆದ ವರ್ಷ ಶಾಲೆಗಳಲ್ಲಿ  ದಾಖಲಾದ  ಸರಣಿ ಲೈಂಗಿಕ ದೌರ್ಜನ್ಯಗಳಿಂದಾಗಿ ವಿದ್ಯಾರ್ಥಿನಿಯರಿಗೆ ಚೂಡಿದಾರ್ ನೀಡಲು ನಿರ್ಧರಿಸಲಾಗಿದೆ.
2016-17 ನೇ ಸಾಲಿನಲ್ಲಿ  ಮುಖ್ಯಮಂತ್ರಿಗಳು ಚೂಡಿದಾರ್ ಭಾಗ್ಯ ಘೋಷಿಸಿದರು. ಆದರೆ 1 ವರ್ಷದ ನಂತರ ಶಿಕ್ಷಣ ತಜ್ಞರು, ಅಧಿಕಾರಿಗಳು ಮತ್ತು ಶಿಕ್ಷಕರ ಜೊತೆ ಸಮಾಲೋಚಿಸಿ ಈ ವರ್ಷದಿಂದ ಅನಪ್ಠಾನಗೊಳಿಸಲಾಗುತ್ತಿದೆ.
ಸರ್ಕಾರ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಮವಸ್ತ್ರ ನೀಡುತ್ತಿದ್ದು, ಇದಕ್ಕಾಗಿ ಸರ್ಕಾರಕ್ಕೆ 75 ಕೋಟಿ ರು. ಹೊರೆ ಬೀಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com