ಆತ್ಮಹತ್ಯೆ ಮಾಡಿಕೊಳ್ಳಲು ಬೆಳ್ಳಂದೂರು ಕೆರೆಗೆ ಹಾರಿದ ಮಹಿಳೆ: ಪ್ರಾಣ ಉಳಿಸಿತು 'ಕಳೆ'

ಆತ್ಮಹತ್ಯೆ ಮಾಡಿಕೊಳ್ಳಲು ಬೆಳ್ಳಂದೂರು ಕೆರೆಗೆ ಹಾರಿದ ಮಹಿಳೆಯನ್ನು ಸತತ ಎರಡು ಗಂಟೆಯ ಪರಿಶ್ರಮದ ನಂತರ ಪೊಲೀಸರು..
ಮಹಿಳೆಯರನ್ನು ರಕ್ಷಿಸಿದ  ಪೊಲೀಸರು
ಮಹಿಳೆಯರನ್ನು ರಕ್ಷಿಸಿದ ಪೊಲೀಸರು
ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಬೆಳ್ಳಂದೂರು ಕೆರೆಗೆ ಹಾರಿದ ಮಹಿಳೆಯನ್ನು ಸತತ ಎರಡು ಗಂಟೆಯ ಪರಿಶ್ರಮದ ನಂತರ ಪೊಲೀಸರು ರಕ್ಷಿಸಿದ್ದಾರೆ.
ಯಮಲೂರಿನ ನಿವಾಸಿ ಮಾದಮ್ಮ(60) ಮನೆಯವರ ಜೊತೆ ಜಗಳ ಮಾಡಿಕೊಂಡು ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರ ಮಾಡಿ ಬೆಳ್ಳಂದೂರು ಕೆರೆಗೆ ಹಾರಿದ್ದಾಳೆ. ಆದರೆ ಕೆರೆಯಲ್ಲಿ ಅತಿಯಾಗಿ ಬೆಳೆದಿದ್ದ ಕಳೆಯಿಂದಾಗಿ ಆಕೆ ಕೂಡಲೇ ನೀರಿನ ಒಳಗೆ ತಲುಪಲು ಸಾಧ್ಯವಾಗಲಿಲ್ಲ. ನಿಧಾನವಾಗಿ ಕೆರೆಯಲ್ಲಿ ಮುಳುಗುತ್ತಿದ್ದಳು.
ಕೆರೆಯ ಮೇಲ್ವಿಚಾರಣೆ ನೋಡಿಕೊಳ್ಳಲು ನೇಮಿಸಿದ್ದ ವಿಚಕ್ಷಣಾ ದಳದ ಹೋಂ ಗಾರ್ಡ್  ಆಕೆಯನ್ನು ನೋಡಿ ಶವವೆಂದು ತಿಳಿದು ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.  ಕೂಡಲೇ 7 ರಿಂದ 8 ಮಂದಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ನಾಗರಾಜು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ, ಆದರೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ನಿಧಾನವಾಗಿ ನೀರಿನಲ್ಲಿ ಮುಳುಗುತ್ತಿರುವುದು ಕಂಡು ಬಂದಿದೆ. ಕೆರೆಗೆ ತೆರಳಲು ನಾವು ಏಣಿಯನ್ನು ಹಾಕಿದೆವು. ನಂತರ ಹಗ್ಗ ಕಟ್ಟಿಕೊಂಡ ಕೆಲವು ಸಿಬ್ಬಂದಿ ಏಣಿಯ ಸಹಾಯದಿಂದ ಮಹಿಳೆಯ ಬಳಿ ತಲುಪಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯ ಕೆರೆಯ ದಡಕ್ಕೆ ತಂದ ಸಿಬ್ಬಂದಿ ಆಕೆ ಉಸಿರಾಡುತ್ತಿರುವುದನ್ನು ಗಮನಿಸಿ ಆಂಬುಲೆನ್ಸ್ ಗೆ ಕರೆ ಮಾಡಿದರೇ ಬರುವುದು ತಡವಾಗುತ್ತದೆ ಎಂದು ಯೋಚಿಸಿದ ಪೊಲೀಸರು ಹೊಯ್ಸಳ ಕಾರಿನಲ್ಲಿ ಆಕೆಯನ್ನು ಹತ್ತಿರದ ಸಕ್ರ ವರ್ಲ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾದಮ್ಮ ಚೇತರಿಸಿಕೊಳ್ಳುತ್ತಿದ್ದು, ಆಕೆಯ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com