ಬೆಂಗಳೂರು ವಿವಿಯಲ್ಲಿ ಜೂನ್ 1 ರಿಂದ 'ಸಕಾಲ' ಜಾರಿ

ಜೂನ್ 1 ರಿಂದ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಕಾಲ ಯೋಜನೆ ಜಾರಿಗೆ ಬರಲಿದ್ದು, ಪರೀಕ್ಷೆ ಹಾಗೂ ಮೌಲ್ಯಮಾಪನ ಸಂಬಂಧಿತ ಸೇವೆಗಳ ಬಗ್ಗೆ ಶೀಘ್ರವೇ ....
ಸಕಾಲ
ಸಕಾಲ
ಬೆಂಗಳೂರು: ಜೂನ್ 1 ರಿಂದ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಸಕಾಲ ಯೋಜನೆ ಜಾರಿಗೆ ಬರಲಿದ್ದು, ಪರೀಕ್ಷೆ ಹಾಗೂ ಮೌಲ್ಯಮಾಪನ ಸಂಬಂಧಿತ ಸೇವೆಗಳ ಬಗ್ಗೆ ಶೀಘ್ರವೇ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಪರೀಕ್ಷಾ ವಿಭಾಗ, ಸೂಪರಿಂಡೆಂಟ್ಸ್, ಅಧಿಕಾರಿಗಳು ಮತ್ತು ಕಂಪ್ಯೂಟರ್ ವಿಭಾಗದ ಸಿಬ್ಬಂದಿ ಜೊತೆ ನಡೆದ ಸಭೆಯಲ್ಲಿ ಪೈಲಟ್ ಬೇಸಿಸ್ ಮೇಲೆ ಏಪ್ರಿಲ್ 1 ರಿಂದ ಯೋಜನೆ ಅನುಷ್ಠಾನಗೊಂಡಿದೆ.
ಈ ಮೊದಲು ಪದವಿ ಪ್ರಮಾಣ ಪತ್ರ ತೆಗೆದುಕೊಳ್ಳಲು ಸುಮಾರು 15 ರಿಂದ 20 ದಿನಗಳ ಕಾಲ ಸಮಯಬೇಕಾಗಿತ್ತು. ಆದರೆ ಸಕಲಾ ಜಾರಿಯಾದ ನಂತರ,  ಅಷ್ಟು ಸಮಯ ಕಾಯುವ ಆಗಿಲ್ಲ, ಕೇವಲ ಮೂರರಿಂದ 4 ದಿನಗಳಲ್ಲೇ ಪ್ರಮಾಣಪತ್ರ ದೊರೆಯುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಸಕಾಲ ಯೋಜನೆಯಡಿ ಬರುವ ಸೇವೆಗಳ ಮಾಹಿತಿ ಬಗ್ಗೆ ವಿವಿ ಪರೀಕ್ಷಾ ವಿಭಾಗ ಪಟ್ಟಿ ಮಾಡಲಿದೆ. ಎರಡು ದಿನಗಳಲ್ಲಿ ತಾತ್ಕಾಲಿಕ ಪದವಿ ಪ್ರಮಾಣಪತ್ರ, ವಲಸೆ ಪ್ರಮಾಣ ಪತ್ರ, ಸೇರಿದಂತೆ ಪಿಎಚ್ ಡಿ ಫಲಿತಾಂಶ ಪ್ರಕಟಿಸಲಾಗುವುದು. 
ಈ ಹಿಂದೆ ಪದವಿ ಪ್ರಮಾಣ ಪತ್ರ ಪಡೆಯಲು ತಿಂಗಳು ಗಟ್ಟಲೇ ಕಾಯಬೇಕಾಗುತ್ತಿತ್ತು. ಆದರೆ ಈಗ ಕೇವಲ ಎರಡು ಮೂರು ದಿನಗದಳಲ್ಲಿ ಪ್ರಮಾಣ ಪತ್ರಸಿಗುವಂತಾಗಿರುವುದು ಸಂತಸ ತಂದಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com