878 ಎಕರೆ ಭೂಮಿ ಖರೀದಿಗೆ ಜಿಂದಾಲ್ ಪ್ರಸ್ತಾವನೆ ಬಗ್ಗೆ ವಿವಾದ!

ಉಕ್ಕು ಘಟಕ(ಸ್ಥಾವರ) ನಿರ್ಮಿಸುವ ಉದ್ದೇಶಕ್ಕಾಗಿ ಭೀಮಗಢದ ವನ್ಯಜೀವಿ ಧಾಮ ಬಳಿ 878 ಎಕರೆ ಭೂಮಿ ಖರೀದಿಸಲು ಮುಂದಾಗಿದ್ದ ಜಿಂದಾಲ್ ಸಂಸ್ಥೆ ಈಗ ವಿವಾದಕ್ಕೆ ಸಿಲುಕಿಕೊಂಡಿದೆ.
ಭೀಮಗಢ ವನ್ಯಜೀವಿಧಾಮ
ಭೀಮಗಢ ವನ್ಯಜೀವಿಧಾಮ
Updated on
ಬೆಳಗಾವಿ: ಉಕ್ಕು ಘಟಕ(ಸ್ಥಾವರ) ನಿರ್ಮಿಸುವ ಉದ್ದೇಶಕ್ಕಾಗಿ ಭೀಮಗಢದ ವನ್ಯಜೀವಿ ಧಾಮ ಬಳಿ 878 ಎಕರೆ ಭೂಮಿ ಖರೀದಿಸಲು ಮುಂದಾಗಿದ್ದ ಜಿಂದಾಲ್ ಸಂಸ್ಥೆ ಈಗ ವಿವಾದಕ್ಕೆ ಸಿಲುಕಿಕೊಂಡಿದೆ.
ಮೇ.22 ರಂದು ಭೂಮಿ ಖರೀದಿಸುವ ಯೋಜನೆಯ ಸಂಬಂಧ ದಿನಪತ್ರಿಕೆಗಳಲ್ಲಿ ಸಾರ್ವಜನಿಕ ಸೂಚನೆ ಪ್ರಕಟಿಸಿದ್ದ ಜಿಂದಾಲ್ ಸಂಸ್ಥೆ, ಉಕ್ಕು ಸ್ಥಾವರ ನಿರ್ಮಾಣಕ್ಕಾಗಿ ಖಾನಾಪುರ ತಾಲೂಕಿನ ಭೀಮಗಢ ವನ್ಯಜೀವಿ ಧಾಮದ ಬಳಿ 878 ಎಕರೆ ಭೂಮಿ ಖರೀದಿಸುತ್ತಿರುವುದಾಗಿ ಹೇಳಿತ್ತು. ಸಂಸ್ಥೆ ಖರೀದಿಸಲು ಉದ್ದೇಶಿಸಿರುವ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಈ ಜಾಗಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ತಕರಾರು ಅಥವಾ ಹಕ್ಕು ಇರುವುದಾದರೆ ಆಕ್ಷೇಪಣೆ ಸಲ್ಲಿಕೆ ಮಾಡಬಹುದು, ಆ ನಂತರ ಸಂಸ್ಥೆ ತನ್ನ ನಿರ್ಧಾರವನ್ನು ಪುನರ್  ಪರಿಶೀಲಿನೆ ನಡೆಸುವುದಾಗಿ ಪ್ರಕಟಣೆಯಲ್ಲಿ ಹೇಳಿತ್ತು.  
ಜಿಂದಾಲ್ ಸಂಸ್ಥೆ ಖರೀದಿಸಲು ಉದ್ದೇಶಿಸಲಾಗಿದ್ದ ಜಾಗ ನಿರ್ಬಂಧಿತ ವನ್ಯಜೀವಿ ಧಾಮದಲ್ಲಿದ್ದ ಹಿನ್ನೆಲೆಯಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಜಿಂದಾಲ್ ಸಂಸ್ಥೆಯ ಸಾರ್ವಜನಿಕ ಸೂಚನೆಯನ್ನು ಓದಿದ ವನ್ಯಜೀವಿ ಸಂರಕ್ಷಣೆ ಕಾರ್ಯಕರ್ತರು ತಕ್ಷಣವೇ ಅರಣ್ಯ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲವಂತೆ. 
878 ಎಕರೆಯಷ್ಟು ಭೂಮಿಗೆ 86 ಜಂಟಿ ಮಾಲಿಕರಿದ್ದು, ಭೀಮಗಢವನ್ನು ವನ್ಯ ಜೀವಿ ಧಾಮ ಎಂದು ಘೋಷಿಸುವುದಕ್ಕೂ ಮುನ್ನ ನಟರು, ಕೈಗಾರಿಕೋದ್ಯಮಿಗಳು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಅನೇಕ ಗಣ್ಯರು ಈಗ ಭೀಮಗಢ ವನ್ಯಜೀವಿ ಧಾಮ ಪ್ರದೇಶದ ವ್ಯಾಪ್ತಿಗೆ ಬರುವ ಭೂಮಿಯನ್ನು ಅತ್ಯಂತ ಕಡಿಮೆ ಮೊತ್ತಕ್ಕೆ 2011 ಕ್ಕೂ ಮುನ್ನ ಖರೀದಿಸಿದ್ದರು. ಆದರೆ 2011 ರ ಡಿಸೆಂಬರ್ ನಲ್ಲಿ ಭೀಮಗಢದ 19,042.58 ಹೆಕ್ಟೇರ್ ನಷ್ಟು ಭೂಮಿಯನ್ನು ವನ್ಯಜೀವಿ ಧಾಮ ಎಂದು ಗುರುತಿಸಲಾಯಿತು. ತಮ್ಮ ಭೂಮಿ ವನ್ಯಜೀವಿ ಧಾಮದ ಪ್ರದೇಶದ ವ್ಯಾಪ್ತಿಯಲ್ಲಿದ್ದಿದ್ದರಿಂದ ಭೂಮಿಯ ಮಾಲಿಕರು ಅದನ್ನು ಖರೀದಿಸುವಂತೆ ಜಿಂದಾಲ್ ಸಂಸ್ಥೆಯನ್ನು ಸಂಪರ್ಕಿಸಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಈ ಪ್ರದೇಶದ್ಲಲಿ ಹುಲಿ ಸೇರಿದಂತೆ ವನ್ಯಜೀವಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದು, ಸಂರಕ್ಷಿಸಬೇಕಾದ ಅರಣ್ಯ ಪ್ರದೇಶವಾಗಿದೆ. ಆದರೆ ಈಗ ಜಿಂದಾಲ್ ಈ ಭೂಮಿ ಖರೀದಿಸುತ್ತಿರುವುದಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದು ವಿವಾದಕ್ಕೀಡಾಗಿದೆ. 
ಇದೇ ಮೊದಲಲ್ಲ
ಜಿಂದಾಲ್ ಮಾದರಿಯಂತೆ ಇದಕ್ಕೂ ಮುನ್ನ ಹುಬ್ಬಳ್ಳಿ ವಿದ್ಯುತ್ ಪೂರೈಕೆ ಸಂಸ್ಥೆ ಭೀಮಗಢ ವನ್ಯಜೀವಿ ಧಾಮಕ್ಕೆ ಸೇರುವ ಪ್ರದೇಶದಲ್ಲಿ ಟ್ರಾನ್ಸ್ ಮಿಷನ್ ಲೈನ್ ಗಳನ್ನು ನಿಲ್ಲಿಸಿತ್ತು. ಆದರೆ ಇದರ ವಿರುದ್ಧ ಸ್ಥಳೀಯ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರಿಂದ ಕಾಗಮಾರಿ ಸ್ಥಗಿತಗೊಂಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com