ವಿಧಾನ ಸೌಧದ 2 ಮಹಡಿ ನಮಗೆ ನೀಡಿ: ಸಚಿವಾಲಯ ಕೋರಿಕೆ

ವಿಧಾನಸೌಧದ ಮೊದಲ ಮತ್ತು ಎರಡನೇ ಮಹಡಿಗಳ ಸುಪರ್ದಿಯನ್ನು ತಮಗೆ ವಹಿಸುವಂತೆ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ..
ವಿಧಾನ ಸೌಧ
ವಿಧಾನ ಸೌಧ
Updated on
ಬೆಂಗಳೂರು: ವಿಧಾನಸೌಧದ ಮೊದಲ ಮತ್ತು ಎರಡನೇ ಮಹಡಿಗಳ  ಸುಪರ್ದಿಯನ್ನು ತಮಗೆ ವಹಿಸುವಂತೆ ವಿಧಾನ  ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಕೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಂಕರಮೂರ್ತಿ,ಇವೆರಡೂ ಮಹಡಿಗಳಲ್ಲಿ ಕೆಲವು ಭಾಗಗಳನ್ನು ಮಾತ್ರ ನಮ್ಮ ವಶಕ್ಕೆ ಕೊಡುವಂತೆ ಕೇಳಿದ್ದೇವೆ ಎಂದು ಹೇಳಿದ್ದಾರೆ. ಬಹಳ ಹಿಂದಿನಿಂದಲೂ ಈ ಪ್ರಯತ್ನ ನಡೆಯುತ್ತಿದೆ, ಆದರೆ ಈಗ ನಾವು ಮನವಿ ಮಾಡಿದಾಗ ಮಾತ್ರ ವಿವಾದ ಸೃಷ್ಟಿಯಾಗುತ್ತಿದೆ ಎಂದು ಶಂಕರಮೂರ್ತಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಸಿಬ್ಬಂದಿಗೆ ಮೂರನೇ ಮಹಡಿಯಲ್ಲಿ ಕೊಠಡಿ ನೀಡಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಸಿಬ್ಬಂದಿಗೆ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ, ನಮ್ಮ ಅಧೀನದಲ್ಲಿರುವ ಕೊಠಡಿಗಳ ನಿರ್ವಹಣೆ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ಸೇರಿದಂತೆ ಯಾರಿಗೆ ಬೇಕಾದರೂ ಕೊಡಬಹುದು. ಕಟ್ಟಡದಲ್ಲಿ ಬದಲಾವಣೆ ಮಾಡಬೇಕಿದ್ದರೆ, ನಮ್ಮ ಅನುಮತಿ  ಕಡ್ಡಾಯ’ ಎಂದೂ ಅವರು ತಿಳಿಸಿದ್ದಾರೆ.
ಸಂಸತ್ತು ಮತ್ತು ವಿವಿಧ ರಾಜ್ಯಗಳಲ್ಲಿ ವಿಧಾನಸಭೆಗಳ ಉಸ್ತುವಾರಿ ಹೊಣೆಯನ್ನು ಸಚಿವಾಲಯಗಳೇ ವಹಿಸಿಕೊಂಡಿವೆ ಹೀಗಾಗಿ ವಿಧಾನಸಭೆ ಉಸ್ತುವಾರಿಯನ್ನು ನಮಗೆ ನೀಡುವಂತೆ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಜೊತೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com