ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಿಎಆರ್ ಮುಖ್ಯಪೇದೆ ಸುಭಾಷ್ ಚಂದ್ರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಪತ್ನಿ ಮತ್ತು ಮಕ್ಕಳಿಗೆ ವಿಷವುಣಿಸಿ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿ ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇದೆ ಸುಭಾಷ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಭಾಷ್ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಆಹಾರ ಮತ್ತು ರಕ್ದ ಮಾದರಿಯನ್ನ ಎಫ್ ಎಸ್ಎಲ್ ಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಸುಭಾಷ್ ಮತ್ತು ವೀಣಾ 4 ವರ್ಷದ ಹಿಂದೆ ವಿವಾಹವಾಗಿದ್ದರು. ಸಿಎಂ ಗೃಹ ಕತೇರಿ ಕೃಷ್ಣಾಗೆ ವರ್ಗಯಿಸಲಾಗಿತ್ತು. ಕೆಲಸದಿಂದ ಮನೆಗೆ ಹಿಂತಿರುಗಿದ ನಂತರ ಆತ ತನ್ನ ಕಟುಂಬಕ್ಕೆ ವಿಷ ಪ್ರಾಷನ ಮಾಡಿಸಿದ್ದಾನೆ ಸ್ಥಳದಲ್ಲಿ ಇಲಿ ಪಾಷಾಣ ದೊರೆತಿದೆ ಎಂದು ಪೊಲೀಸರು ಹೇಳಿದ್ದಾರೆ.
ಸುಭಾಷ್ ಸುಮಾರು 25 ಲಕ್ಷ ರು ಸಾಲ ಮಾಡಿದ್ದ. ಐಪಿಎಲ್ ಪ್ರೀಮಿಯರ್ ಲೀಗ್ ನ ಬೆಟ್ಟಿಂಗ್ ನಲ್ಲಿ ಆತ ಹಣ ಕಳೆದುಕೊಂಡಿದ್ದ ಎಂಬುದು ತಿಳಿದು ಬಂದಿದೆ.
ಆತ ಬಹುದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದ್ದ ಎಂದು ಆತನ ಸಂಬಂಧಿಗಳು ತಿಳಸಿದ್ದಾರೆ. ಹೀಗಾಗಿ ಬೆಟ್ಟಿಂಗ್ ನಲ್ಲಿ ಹಣ ಕಳೆದು ಕೊಂಡಿದ್ದನೇ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ ಎಂದು ಈಶಾನ್ಯ ವಲಯ ಡಿಜಿಪಿ ಹರ್ಷ ಹೇಳಿದ್ದಾರೆ.
2006 ರಲ್ಲಿ ಸಿಎಆರ್ ದೆ ಪೇದೆಯಾಗಿ ಸುಭಾಷ್ ಕೆಲಸಕ್ಕೆ ಸೇರಿದ್ದರು. ಆರು ತಿಂಗಳ ಹಿಂದೆ ಬಡ್ತಿ ದೊರೆತು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.