ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಭಕ್ತರು ವಜ್ರ ಖಚಿತ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ.
ಕಿರಿಯ ಸ್ವಾಮೀಜಿ ವಿಜಯಾನಂದ ತೀರ್ಥರು ಕಿರೀಟವನ್ನು ಶ್ರೀ ಗಣಪತಿ ಸಚ್ಚಿದಾನದ ಸ್ವಾಮೀಜಿ ಅವರಿಗೆ ಅರ್ಪಿಸಿದರು. ಈ ವೇಳೆ ಚಿನ್ನದ ಸಿಂಹಾಸನದಲ್ಲಿ ಆಸೀನರಾಗಿದ್ದ ಸ್ವಾಮೀಜಿ ಭಕ್ತರನ್ನು ಆಶೀರ್ವದಿಸಿದರು.
ಪ್ರತಿಯೊಬ್ಬ ಭಾರತೀಯನು ಶಾಂತಿ, ಪ್ರೀತಿ, ಸತ್ಯ ಹಾಗೂ ಧರ್ಮದ ಮಂತ್ರವನ್ನು ಪಠಿಸಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಈ ವೇಳೆ ಹಾಜರಿದ್ದರು. ಸ್ವಾಮೀಜಿ ಅವರು ಹುಟ್ಟು ಹಬ್ಬಕ್ಕೆ ಫಡ್ನವೀಸ್ ಹಾಜರಾಗಿದ್ದು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿತ್ತು.
ಈ ವೇಳೆ ಮಾತನಾಡಿದ ಫಡ್ನವೀಸ್ ಸಮಾಜದಲ್ಲಿನ ತಾರತಮ್ಯ ಅಂತ್ಯಗೊಳ್ಳಬೇಕು. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಲು ಇದು ಅತ್ಯುತ್ತಮ ಸಮಯ ಎಂದು ಕರೆ ನೀಡಿದರು.