ಜೆಡಿಎಸ್ ಹೆಡೆಮುರಿ ಕಟ್ಟಲು ಮಂಡ್ಯದಲ್ಲಿ ಸಿದ್ದರಾಮಯ್ಯ 'ಸಕ್ಕರೆ' ರಾಜಕೀಯ

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಸಿಎಂ ಸಿದ್ದರಾಮಯ್ಯ ಹೊಸ ತಂತ್ರ ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಮೈಸೂರು: ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಸಿಎಂ ಸಿದ್ದರಾಮಯ್ಯ ಹೊಸ ತಂತ್ರ ಎಣೆದಿದ್ದಾ ರೆ.
ರೈತ ಸಮುದಾಯವನ್ನು ಸಂತಸಗೊಳಿಸಲು ಹಾಗೂ ಜೆಡಿಎಸ್ ಪಕ್ಷವನ್ನು ಮಂಡ್ಯದಲ್ಲಿ ಮೂಲೆಗುಂಪು ಮಾಡಲು ಮೈಶುಗರ್ ಕಂಪನಿ ಆಯೋಗ ರಚಿಸಲು ನಿರ್ಧರಿಸಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತ ನಂತರ ಜೆಡಿಎಸ್ ಮಟ್ಟ ಹಾಕಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ ಮಂಡ್ಯದಲ್ಲಿ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್ ಪ್ರಭಾವ ಕುಂದುವಂತೆ ಮಾಡಲು ಹಾಗೂ ಹಾಸನ ಮತ್ತು ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆಗೊಳಿಸಲು ಸಿದ್ದರಾಮಯ್ಯ ಬಯಸಿದ್ದಾರೆ.
ಮೈಶುಗರ್ ಕಂಪನಿಯನ್ನು ಆಧುನೀಕರಣಗೊಳಿಸಲು ಸರ್ಕಾರ ಸುಮಾರು 100 ಕೋಟಿ ರು ಅನುದಾನ ನೀಡಿದೆ. ಹಿಂದಿನ ಸಿಎಂ ಗಳಾಗಿದ್ದ ಎಚ್.ಡಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಮಾರ್ಗವನ್ನು ಸಿದ್ದರಾಮಯ್ಯ ಅನುಸರಿಸಿದ್ದಾರೆ. ಮೈಶುಗರ್ ಕಂಪನಿಯ ಪುನರುಜ್ಜೀವನ ಗೊಳಿಸಲು ಮಾಜಿ ಸಚಿವರುಗಳಾದ ಅಂಬರೀಷ್ ಮತ್ತು ಎಚ್ ಎಸ್ ಮಹಾದೇವ ಪ್ರಸಾದ್ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಜಿಲ್ಲೆಯ ಜನ ಬೈಯ್ಯುತ್ತಿದ್ದರು.
ಕಾರ್ಖಾನೆ ನೌಕರರಿಗೆ ಕಳೆದ 10 ತಿಂಗಳಿಂದ ವೇತನ ನೀಡಿರಲಿಲ್ಲ. ಕಬ್ಬು ಬೆಳೆಯುವ ಈ ಭಾಗದ ರೈತರಿಗೆ ಮೈಶುಗರ್ ಕಾರ್ಖಾನೆ ಜೀವನಾಧಾರವಾಗಿದೆ. ಜೂನ್ 15ರ ನಂತರ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಖಾನೆಗೆ ಹೊಸ ಯಂತ್ರೋಪಕರಣ ಹಾಗೂ ಹೊಸ ಬಾಯ್ಲರ್ ಗಳನ್ನು ಜೋಡಿಸಲಾಗಿದೆ. ಜೊತೆಗೆ 15 ದಿನಗಳಲ್ಲಿ ರೈತರಿಗೆ ಬಾಕಿಯಿರುವ ಹಣವನ್ನು ಪಾವತಿಸುವಂತೆ ಹೇಳಿದ್ದಾರೆ. 
ಇನ್ನು ಪ್ರತಿ ಟನ್ ಕಬ್ಬಿಗೆ, 3.500 ರು ನೀಡುವಂತೆ ರೈತ ಸಂಘ ಒತ್ತಾಯಿಸಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com