ಮ್ಯಾಟ್ರಿಕ್ಸ್ ಇಮೇಜಿಂಗ್ ಟೆಂಡರ್ ಪ್ರಕರಣ: ಸಿಎಂ ಪುತ್ರ ಯತೀಂದ್ರಗೆ ಎಸಿಬಿ ಕ್ಲೀನ್ ಚಿಟ್

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸೆಲ್ಯೂಷನ್ ಕಂಪೆನಿ ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಲೀನ್ ಚಿಟ್ ನೀಡಿದೆ.
ಮ್ಯಾಟ್ರಿಕ್ಸ್ ಇಮೇಜಿಂಗ್ ಟೆಂಡರ್ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಎಸಿಬಿ  ಕ್ಲೀನ್ ಚಿಟ್
ಮ್ಯಾಟ್ರಿಕ್ಸ್ ಇಮೇಜಿಂಗ್ ಟೆಂಡರ್ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಎಸಿಬಿ ಕ್ಲೀನ್ ಚಿಟ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸೆಲ್ಯೂಷನ್ ಕಂಪೆನಿ ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಲೀನ್ ಚಿಟ್ ನೀಡಿದೆ. ಸಿಎಂ ಪುತ್ರ ಯತೀಂದ್ರ ವಿರುದ್ಧ ವಿಚಾರಣೆಯನ್ನು ಮುಕ್ತಾಯಗೊಳಿಸಿದ ಎಸಿಬಿ ಅವರ ವಿರುದ್ಧ ಅಆಪಾದನೆಗಳು ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಹೇಳಿದೆ.
ಸಿದ್ದರಾಮಯ್ಯ್ ಪುತ್ರ ಯತೀಂದ್ರ  ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸಲ್ಯೂಷನ್‌ ಇಂಡಿಯಾ ಸಂಸ್ಥೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ಥ ಸುರಕ್ಷಾ ಯೋಜನೆಯಡಿ ಡಯಾಗ್ನೊಸ್ಟಿಕ್‌ ಸರ್ವಿಸಸ್ ಆರಂಭಿಸಲು ನಿಯಮಬಾಹಿರವಾಗಿ ನೀಡಲಾಗಿದೆ. ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರನ್  2016ರ ಮೇ 23 ರಂದು ದೂರು ಸಲ್ಲಿಸಿದ್ದರು. ಇದರೊಡನೆ ಮುಖ್ಯಮಂತ್ರಿಗಳು ಸ್ವಜನ ಪಕ್ಷಪಾತ ನಡೆಸುತ್ತಿದ್ದಾರೆ ಎಂದು ಎಸಿಬಿ ಮತ್ತು ರಾಜ್ಯಪಾಲರ ಬಳಿ ಆರೋಪಿಸಿದ್ದರು
ಇದೀಗ ಎಸಿಬಿ ವಿಚಾರಣೆ ಮುಕ್ತಾಯಗೊಳಿಸಿದ್ದುಾರೋಪ ಸಾಬೀತಾಗದ ಹಿನ್ನೆಲೆಯಲ್ಲಿ ವಿಚಾರಣೆ ನಿಲ್ಲಿಸಿರುವುದಾಗಿ ಎಸಿಬಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com