ಮಕ್ಕಳ ದಿನಾಚರಣೆಗೆ ಕಬ್ಬನ್ ಪಾರ್ಕ್ ನಲ್ಲಿ ಕ್ಯಾಪ್ಸಿಕಂ ಪೊಲೀಸ್ ಠಾಣೆ!

ಗುಲಾಬಿಗಳು, ಲಿಲ್ಲಿ ಹೂಗಳು, ಆರ್ಕಿಡ್ ಗಳು, ಡೇಲಿಯಾ ಮೊದಲಾದ ಒಂದು ಲಕ್ಷಕ್ಕೂ ಅಧಿಕ ಹೂವುಗಳನ್ನು...
ಕಬ್ಬನ್ ಪಾರ್ಕ್ ನಲ್ಲಿ ಹೂವಿನಿಂದ ತಯಾರಿಸಿದ ವಿಮಾನ
ಕಬ್ಬನ್ ಪಾರ್ಕ್ ನಲ್ಲಿ ಹೂವಿನಿಂದ ತಯಾರಿಸಿದ ವಿಮಾನ
ಬೆಂಗಳೂರು: ಗುಲಾಬಿಗಳು, ಲಿಲ್ಲಿ ಹೂಗಳು, ಆರ್ಕಿಡ್ ಗಳು, ಡೇಲಿಯಾ ಮೊದಲಾದ ಒಂದು ಲಕ್ಷಕ್ಕೂ ಅಧಿಕ ಹೂವುಗಳನ್ನು ಸೇರಿಸಿ ಕಬ್ಬನ್ ಪಾರ್ಕ್ ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ತಾವರೆಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ನವೆಂಬರ್ 11ರಿಂದ 14 ರವರಗೆ ಮೂರು ದಿನಗಳ ಕಾಲ ವಿಶೇಷ ಪುಷ್ಪ ಪ್ರದರ್ಶನ ಕೈಗೊಳ್ಳಲಾಗಿದೆ.
ಪುಷ್ಪ ಪ್ರದರ್ಶನದಲ್ಲಿ ತಾವರೆಯ ದೇವಸ್ಥಾನ ನಿರ್ಮಾಣ ಪ್ರಮುಖ ಆಕರ್ಷಣೆಯಾಗಿದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. 10 ಅಡಿ ಎತ್ತರಕ್ಕೆ ನಿರ್ಮಿಸಲಾಗಿದ್ದು ಕಬ್ಬನ್ ಪಾರ್ತ್ ಬಾಂಡ್ ಸ್ಟಾಂಡ್ ನಲ್ಲಿ ಈ ಹೂವಿನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಪುಷ್ಪ ಪ್ರದರ್ಶನಕ್ಕೆ 5ರಿಂದ 6 ಲಕ್ಷ ಹೂವುಗಳನ್ನು ಬಳಸಲಾಗಿದೆ.
ಕಬ್ಬನ್ ಪಾರ್ಕ್ ನ ಪುಷ್ಪ ಪ್ರದರ್ಶನದ ಮತ್ತೊಂದು ಪ್ರಮುಖ ಆಕರ್ಷಣೆ ಕ್ಯಾಪ್ಸಿಕಂನಿಂದ ತಯಾರಿಸಿದ ಪೊಲೀಸ್ ಠಾಣೆ. ಪೊಲೀಸರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಪುಷ್ಪದಿಂದ ತಯಾರಿಸಲ್ಪಟ್ಟ ಪೊಲೀಸ್ ಠಾಣೆಯ ಆಕರ್ಷಣೆಯಾಗಿದೆ. ಪೊಲೀಸ್ ಠಾಣೆ ನಿರ್ಮಾಣಕ್ಕೆ ಸಾವಿರಾರು ಕ್ಯಾಪ್ಸಿಕಂಗಳನ್ನು ಬಳಸಲಾಗಿದೆ.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಜನರಿಗೆ ಕಡಿಮೆ ವೆಚ್ಚದಲ್ಲಿ ತಾರಸಿ ಗಾರ್ಡನ್, ತರಕಾರಿ ಬೆಳೆಯುವ ಬಗ್ಗೆ ಹೇಳಿಕೊಡಲಿದೆ.ನಗರ ತೋಟಗಾರಿಕೆ ಬಗ್ಗೆ ಜನರಿಗೆ ಹೆಚ್ಚು ಒಲವು ತೋರುವಂತೆ ಮಾಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com