ನಂದಿನಿ ಈಶ್ವರ್, ಕಲಾವಂತ ಕುಟುಂಬದಲ್ಲಿ ಜನಿಸಿದವರು. 1947 ರ ಆಗಸ್ಟ್ 7ರಂದು ಜನಿಸಿದ ನಂದಿನಿ ತಂದೆ, ಎಮ್. ಎಸ್. ಶ್ರಿಕಂಥಯ್ಯ,, ತಾಯಿ, ಎಮ್. ಎಸ್. ಶಾಂತಮ್ಮ ರವರ ಪ್ರೋತ್ಸಾಹದಿಂದ ಬಾಲ್ಯದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿದರು. ಮೈಸೂರು ವಿಶ್ವವಿದ್ಯಾಲಯದ ಬಿ. ಎಸ್. ಸಿ. ಪದವಿ ಗಳಿಸಿದ ಇವರು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ, ಎಮ್. ಎ. ಪದವಿ ಹೊಂದಿದರು. ಡಾ.ಕೆ. ವೆಂಕಟಲಕ್ಷಮ್ಮ, ಲಲಿತ ದೊರೈ, ಮೈಸೂರಿನ ವೈ ಎನ್. ಸಿಂಹ, ಮೊದಲಾದ ದಿಗ್ಗಜರಿಂದ 'ಭರತನಾಟ್ಯ ನೃತ್ಯವಿದ್ಯೆ 'ಕಲಿತರು. ತದನಂತರ 'ದೆಹಲಿಯ ಗಂಧರ್ವ ಮಹಾ ವಿದ್ಯಾಲಯ'ದ 'ತೀರ್ಥರಾಮ್ ಆಜಾದ್' ರಿಂದ ಕಥಕ್ ನಾಟ್ಯವನ್ನೂ, ದೆಹಲಿ ಬ್ಯಾಲೆ ಗ್ರೂಪ್ ನಿರ್ದೇಶಕ 'ವಾಲ್ಮೀಕಿ ಬ್ಯಾನರ್ಜಿ'ಯವರಿಂದ ಮಣಿಪುರಿ ಮತ್ತು ಜಾನಪದ ನೃತ್ಯ, ಶೈಲಿಯನ್ನೂ 'ವೇದಾಂತಮ್ ಪ್ರಹ್ಲಾದ ಶರ್ಮ' ಮತ್ತು 'ವಸುಮತಿ ಗೋಪಾಲ ಕೃಷ್ಣಾ ಶರ್ಮ'ರಿಂದ ಕುಚಿಪುಡಿ ನಾಟ್ಯ ವನ್ನು ಕಲಿತರು. 'ಗುಜರಾತಿನ, ಹಿಮ್ಮತ್ ಸಿಂಹ ಚೌಹಾನ್ 'ರವರ ಸಾಭಿನಯವನ್ನು, ಮತ್ತು, ಎಮ್. ಜೆ. ಶ್ರೀನಿವಾಸಯ್ಯಂಗಾರ್ ರಿಂದ, ಎ. ಎಸ್. ಪದ್ಮರವರಿಂದ ವೀಣಾವಾದನವನ್ನೂ ಕಲಿತರು.