ಸಾರಿಗೆ ಒಕ್ಕೂಟದ ಬೇಡಿಕೆಗೆ ಸರ್ಕಾರ ಒಪ್ಪಿಗೆ, ಪ್ರತಿಭಟನೆ ವಾಪಸ್

ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಒಕ್ಕೂಟ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದೆ.
ಹಳೆ ವಾಹನಗಳಿಗೆ ಮತ್ತು 3.5 ಟನ್ ತೂಕಕ್ಕಿಂತ ಕಡಿಮೆ ಭಾರದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾರಿಗೆಗಳಿಗೆ ಸ್ಪೀಡ್ ಗವರ್ನರ್ ಹೇರಬಾರದು ಎಂದು ಒತ್ತಾಯಿಸಿ ನೌಕರರು ನಿನ್ನೆ ಸಾರಿಗೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದರು. ಇದಕ್ಕೆ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ಟ್ಯಾಕ್ಸಿ ನಿರ್ವಾಹಕರ ಒಕ್ಕೂಟದ ಅಧ್ಯಕ್ಷ ಆರ್.ಕೆ.ಹೊಳ್ಳ ತಿಳಿಸಿದ್ದಾರೆ. 
ಇದಕ್ಕೆ ಹೊರತಾಗಿ ಕಳೆದ ಏಪ್ರಿಲ್ ನಲ್ಲಿ ನೀಡಿದ್ದ ಭರವಸೆಯಂತೆ ಹೆಚ್ಚಿಸಲಾಗಿದ್ದ ಕೆಲವು ಯಾಂತ್ರೀಕೃತ ಶುಲ್ಕಗಳನ್ನು ತೆಗೆದುಹಾಕಲು ಕೂಡ ಸಾರಿಗೆ ಇಲಾಖೆ ಒಪ್ಪಿಗೆ ನೀಡಿದೆ. ಈ ಪ್ರಸ್ತಾವನೆ ಹಣಕಾಸು ಇಲಾಖೆಗೆ ಹೋಗಿದ್ದು ಕೆಲವು ಶುಲ್ಕಗಳನ್ನು ಏಕಪಕ್ಷೀಯವಾಗಿ ಬಿಟ್ಟುಬಿಡಲು ನಿರ್ಧರಿಸಲಾಗಿದ್ದು ಯಾಂತ್ರೀಕೃತ ಶುಲ್ಕಗಳನ್ನು ಕೂಡ ಬಿಡಲು ನಿರ್ಧರಿಸಲಾಗಿದೆ ಎಂದು ಹೊಳ್ಳ ತಿಳಿಸಿದರು.

ಬೇರೆ ರಾಜ್ಯಗಳಿಗೆ ಪ್ರವೇಶಿಸುವ ವಾಹನಗಳ ಮೇಲೆ ವಿಧಿಸುವ ವಾಣಿಜ್ಯ ಶುಲ್ಕವನ್ನು ತೆಗೆದುಹಾಕುವ ಬಗ್ಗೆ ಅಧಿಕಾರಿಗಳು ಸದ್ಯದಲ್ಲಿಯೇ ದಕ್ಷಿಣ ಭಾರತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com