ಬೀದರ್:ಲಘು ಭೂ ಕಂಪನ, ಚಳಿಯನ್ನು ಲೆಕ್ಕಿಸದೆ ಇಡೀ ರಾತ್ರಿ ಮನೆಯಿಂದ ಹೊರಗೆ ಕಾಲಕಳೆದ ಗ್ರಾಮಸ್ಥರು

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಾಲ್ಕು ಬಾರಿ ಲಘು ಭೂಕಂಪ ಉಂಟಾಗಿದ್ದು,....
ಅಧಿಕಾರಿಗಳೊಂದಿಗೆ ಗ್ರಾಮಸ್ಥರು
ಅಧಿಕಾರಿಗಳೊಂದಿಗೆ ಗ್ರಾಮಸ್ಥರು
ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಾಲ್ಕು ಬಾರಿ ಲಘು ಭೂಕಂಪ ಉಂಟಾಗಿದ್ದು, ಆತಂಕಗೊಂಡ ಗ್ರಾಮಸ್ಥರು ಚಳಿಯನ್ನು ಲೆಕ್ಕಿಸದೆ ಇಡೀ ರಾತ್ರಿ ಮನೆಯಿಂದ ಹೊರಗೆ ಕಾಲ ಕಳೆದಿದ್ದಾರೆ.
ನಿನ್ನೆ ರಾತ್ತಿ 1 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯ ನಡುವೆ ಕನಿಷ್ಠ ನಾಲ್ಕು ಬಾರಿ ಲಘು ಭೂಕಂಪನದ ಅನುಭವವಾಗಿದೆ ಎಂದು ಗ್ರಾಮಸ್ಥರು ಇಂದು ತಿಳಿಸಿದ್ದಾರೆ. ಅಲ್ಲದೆ ಭೂಕಂಪನದಿಂದಾಗಿ ಕೆಲವು ಮನೆಗಳಿಗೆ ಹಾನಿಯಾಗಿದೆ ಮತ್ತು ಬಿರುಕು ಬಿಟ್ಟಿವೆ ಎಂದು ಹೇಳಿದ್ದಾರೆ. ಇದರಿಂದ ಹೆದರಿದ ಗ್ರಾಮಸ್ಥರು ಎಲ್ಲರು ಒಂದು ಕಡೆ ಸೇರಿ ಬೆಂಕಿ ಹಾಕಿ ಕಾಯಿಸಿಕೊಂಡು ರಾತ್ರಿ ಇಡೀ ಭಯದಲ್ಲಿ ಕಾಲಕಳೆದಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ದೇವೇಂದ್ರಪ್ಪ ಪಾನಿ ಮತ್ತು ತಾಲೂಕ ಪಂಚಾಯತ್ ಅಧಿಕಾರಿ ಡಾ.ಗೋವಿಂದ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ರೀತಿ ಪದೇ ಪದೇ ಭೂಮಿ ನಡುಗುತ್ತಿರುವುದಾದ್ರೂ ಏಕೆ ಎಂದು ಆತಂಕದಿಂದ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಭೂಕಂಪನವಾದ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ. ಸಣ್ಣ ಪ್ರಮಾಣದ ಭೂ ಕಂಪನ ಕೆಲವು ಬಾರಿ ರಿಕ್ಚರ್ ಮಾಪಕದಲ್ಲಿ ದಾಖಲಾಗುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com