ನಟ ಶಿವರಾಜ್ ಕುಮಾರ್ ಮನವಿಗೆ ಸ್ಪಂದನೆ: ಮಾನ್ಯತಾ ಟೆಕ್ ಪಾರ್ಕ್ ಬಳಿ ಒನ್ ವೇ ಸಂಚಾರ

ಸಂಜೆ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಅಪಾರ ವಾಹನ ದಟ್ಟಣೆಯಿಂದ ಉಂಟಾಗುವ ಸಂಚಾರ ಸಮಸ್ಯೆ ಪರಿಹರಿಸಬೇಕೆಂದು ನಟ ಶಿವರಾಜ್ ಕುಮಾರ್...
ಮಾನ್ಯತಾ ಟೆಕ್ ಪಾರ್ಕ್
ಮಾನ್ಯತಾ ಟೆಕ್ ಪಾರ್ಕ್
ಬೆಂಗಳೂರು:ಸಂಜೆ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಅಪಾರ ವಾಹನ ದಟ್ಟಣೆಯಿಂದ ಉಂಟಾಗುವ ಸಂಚಾರ ಸಮಸ್ಯೆ ಪರಿಹರಿಸಬೇಕೆಂದು ನಟ ಶಿವರಾಜ್ ಕುಮಾರ್ ಕಳೆದ ಮಂಗಳವಾರ ಗೃಹ ಸಚಿವ ರಾಮಲಿಂಗಾ ರೆಡ್ಜಿ ಅವರಿಗೆ ಮನವಿ ಮಾಡಿದ್ದರು. 
ಶಿವರಾಜ್ ಕುಮಾರ್ ಅವರ ಮನವಿ ಮೇರೆಗೆ ಗುರುವಾರ ಮಾನ್ಯತಾ ಟೆಕ್‌ಪಾರ್ಕ್‌ಗೆ ಭೇಟಿ ನೀಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಅಲ್ಲಿನ ಸಂಚಾರ ಸಮಸ್ಯೆ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.
ಸಚಿವರ ಆದೇಶದ ಮೇರೆಗೆ ಮಾನ್ಯತಾ ಟೆಕ್ ಪಾರ್ಕ್ ನ 3-5ನೇ ಗೇಟ್ ವರೆಗೂ  ಸಂಜೆ 5.30 ರಿಂದ ರಾತ್ರಿ 8.30ರ ವರೆಗೊ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶಿಸಿದ್ದಾರೆ. ಶುಕ್ರವಾರ ಈ ಆದೇಶ ಹೊರಡಿಸಿರುವ ಅವರು ತಕ್ಷಣದಿಂದಲೇ  ಆದೇಶ ಅನುಷ್ಠಾನಗೊಳಿಸಬೇಕೆಂದು ತಿಳಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ನ ಗೇಟ್ ನಂ,5 ರಿಂದ ಹೊರಹೋಗುತ್ತಿದ್ದ ವಾಹನಗಳನ್ನು  ಗೇಟ್ ಸಂಖ್ಯೆ 1,2,ಮತ್ತು 3 ರಿಂದ ಬರುವ ಮೂಲಕ ಹೊರಹೋಗುವಂತೆ ಸೂಚಿಸಲಾಗಿದೆ.   ಗೇಟ್ ಸಂಖ್ಯೆ 5 ರಲ್ಲಿ ರೆಸಿಡೆನ್ಸಿಯಲ್ ಲೇಔಟ್ ಆಗಿದ್ದು, ವಾಹನಗಳ ಗಳ ಸಂಖ್ಯೆ ಅಧಿಕವಾಗಿ, ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು, ಪೀಕ್ ಅವರ್ ನಲ್ಲಿ ಅಲ್ಲಿನ ನಿವಾಸಿಗಳಿಗೆ ಮನೆ ತಲುಪುವುದೇ ಕಷ್ಟ ವಾಗುತ್ತಿತ್ತು.
ವಾರದ ದಿನಗಳಲ್ಲಿ ಗೇಟ್ ನಂ 5 ರಲ್ಲಿ ಸಂಜೆ 5.30 ರಿಂದ ರಾತ್ರಿ 8.30 ರವರೆಗೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಸದ್ಯ ತಾತ್ಕಾಲಿಕ ಪರಿಹಾರ ಸೂಚಿಸಿದ್ದು, ಶಾಶ್ವತ ಪರಿಹಾರಕ್ಕಾಗಿ ಚಿಂತಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com