ಬೆಂಗಳೂರು: ಬಾಲಭವನ ಮಕ್ಕಳ ಹಬ್ಬದಲ್ಲಿ ಬಣ್ಣಗಳ ಕಲರವ

ಮಕ್ಕಳ ದಿನಾಚರಣೆ ಪ್ರಯುಕ್ತ ಇಂದು ಸಾಯಂಕಾಲದವೆರೆಗೆ ಕಬ್ಬನ್ ಪಾರ್ಕ್ ನ ಬಾಲಭವನಕ್ಕೆ ಭೇಟಿ ನೀಡಿದವರಿಗೆ ಖುಷಿ ಪಡಲು...
ಮಣ್ಣಿಮ ಮಡಕೆ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿರುವ ಕಲಾವಿದ
ಮಣ್ಣಿಮ ಮಡಕೆ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿರುವ ಕಲಾವಿದ
Updated on
ಬೆಂಗಳೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಇಂದು ಸಾಯಂಕಾಲದವೆರೆಗೆ ಕಬ್ಬನ್ ಪಾರ್ಕ್ ನ ಬಾಲಭವನಕ್ಕೆ ಭೇಟಿ ನೀಡಿದವರಿಗೆ ಖುಷಿ ಪಡಲು ಹಲವು ಕಾರಣಗಳಿವೆ.
ಮಹಿಳಾ ಮತ್ತು ಮಕ್ಕಳ ಇಲಾಖೆ ಏರ್ಪಡಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಈ ವರ್ಷ ಅನೇಕ ಮಕ್ಕಳನ್ನು ಸೆಳೆದಿದೆ ಎಂದರೆ ತಪ್ಪಾಗಲಾರದು. ಮೊನ್ನೆ 11ರಂದು ಆರಂಭಗೊಂಡ ಕಾರ್ಯಕ್ರಮ ಇಂದು ಸಾಯಂಕಾಲ ಮುಕ್ತಾಯವಾಗಲಿದೆ. ಕೆಲವು ವರ್ಷಗಳ ಹಿಂದೆ ಎರಡು ದಿನಗಳು ನಡೆಯುತ್ತಿದ್ದ ಹಬ್ಬ ಇದೀಗ ನಾಲ್ಕು ದಿನಗಳಿಗೆ ವಿಸ್ತರಣೆಯಾಗಿದೆ.
ಬಾಲಭವನದ ಸುತ್ತಮುತ್ತ ಪಾರ್ಕ್ ನಲ್ಲಿ ಮಳಿಗೆಗಳು, ಪ್ರದರ್ಶನಗಳು ಮತ್ತು ಮಕ್ಕಳಿಂದ ಹಲವು ಸಾಂಸ್ಕೃತಿಕ ಪ್ರದರ್ಶನಗಳು ನೋಡುಗರ ಮನಸೆಳೆಯುತ್ತಿವೆ. ತಮ್ಮ ಮಕ್ಕಳೊಂದಿಗೆ ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡ ವೈಶ್ಣವಿ ಎಂಬವರು, ಇದೊಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ನನ್ನ ಮಕ್ಕಳನ್ನು ಇಲ್ಲಿಗೆ ಕರೆತಂದಿರುವುದು ಖುಷಿಯಾಗಿದೆ. ಬೊಂಬೆಗಳಂತೆ ಮಕ್ಕಳು ವೇಷ ತೊಟ್ಟಿದ್ದರೆ ಜನರು ಅದಕ್ಕೆ ಫ್ಲೂಟು ಮತ್ತು ಡ್ರಮ್ ಗಳನ್ನು ನುಡಿಸುತ್ತಿದ್ದರು. ಬೇರೆ ಜಿಲ್ಲೆಗಳಿಂದ ಸಹ ಶಾಲಾ ಮಕ್ಕಳು ಬಾಲಭವನಕ್ಕೆ ಕಾರ್ಯಕ್ರಮ ನೀಡಲು ಬಂದಿದ್ದರು.
ಬಾಲಭವನದ ಹತ್ತಿರ ನೋ ಯುವರ್ ಆರ್ಮಿ ಎಂಬ ಮಳಿಗೆ ಅಲ್ಲಿಗೆ ಬಂದವರನ್ನು ಆಕರ್ಷಿಸಿತು. ಶಸ್ತ್ರಾಸ್ತ್ರಗಳ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಮಿಲಿಟರಿಯಲ್ಲಿ ಉದ್ಯೋಗಗಳು ಮತ್ತು ಶಸ್ತ್ರಾಸ್ತ್ರಗಳ ಮಾದರಿಯನ್ನು ನಾನು ನೋಡಿದೆ ಎಂದು 8ನೇ ತರಗತಿ ವಿದ್ಯಾರ್ಥಿ ಈಶಾ ಎನ್ನುತ್ತಾಳೆ. 
ಮಣ್ಣಿನಲ್ಲಿ ಕುಸ್ತಿ, ಜೇಡಿ ಮಣ್ಣಿನ ಮಾದರಿ, ರಸಪ್ರಶ್ನೆ ಮತ್ತು ಕಥೆ ಹೇಳುವಿಕೆ ಇತ್ಯಾದಿಗಳಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಂಡರು. ಛಾಯಾಚಿತ್ರ ಮತ್ತು ಚಿತ್ರಕಲೆ ಪ್ರದರ್ಶನಗಳು ಕೂಡ ಇದ್ದವು. ಮೊಬೈಲ್ ಲೈಬ್ರೆರಿ ಕೂಡ ಪಾರ್ಕ್ ಸುತ್ತ ಸುತ್ತುತ್ತಿತ್ತು. ತೋಟಗಾರಿಕೆ ಇಲಾಖೆ ತಾಜ್ ಮಹಲ್ ಮತ್ತು ದೆಹಲಿಯ ತಾವರೆ ದೇವಸ್ಥಾನದ ಹೂವಿನ ಪ್ರತಿಕೃತಿಯನ್ನು ತಯಾರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com