ಬೆಂಗಳುರು: ಎಲ್ಪಿಜಿ ಸೋರಿಕೆಯಿಂದ ಸ್ಪೋಟ ಸಂಭವಿಸಿ ಕುಟುಂಬದ ನಾಲ್ವರು ತೀವ್ರವಾಗಿ ಗಾಯಗೊಂದ ಘಟನೆ ಬಂಗಳೂರಿನ ಹೆಬ್ಬಗೋಡಿ ತಿರುಪಾಳ್ಯದಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಂದು ತಿಳಿದು ಬಂದಿದೆ.
ಗಾಯಗೊಂದವರನ್ನು ವಿಕಾಸ್ ಪ್ರಧಾನ್, ಆತನ ಪತ್ನಿ ಕರ್ಣಾ, ಆತನ ಸೋದರರಾದ ದೇವನ್ ಮತ್ತು ಚವಾಣ್ ಎಂದು ಗುರುತಿಸಲಾಗಿದ್ದು ಅಸ್ಸಾಂ ನಿಂದ ನಗರಕ್ಕೆ ಬಂದು ನೆಲೆಲ್ಸಿದ್ದರು ಎನ್ನಲಾಗಿದೆ. ದಂಪತಿಗಳು ನಗರದ ಗಾಜಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಬೆಳಗ್ಗೆ 6.50 ಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರು ಬೆಳಗ್ಗೆ ಎದ್ದು ಚಹಾ ಮಾಡುವ ಸಲುವಾಗಿ ಗ್ಯಾಸ್ ಆನ್ ಮಾಡಿದ್ದಾರೆ.ಗ್ಯಾಸ್ ನ ರೆಗ್ಯುಲೇಟರ್ ಸರಿಯಾಗಿರದ ಕಾರಣ ಅದನ್ನು ಬದಲಿಸುವ ಅಗತ್ಯವಿದ್ದಿತ್ತು. ಆದರೆ ಕುಟುಂಬದ ಸದಸ್ಯರು ಅದನ್ನು ನಿರ್ಲಕ್ಷಿಸಿದ್ದರು ಎಂದು ಹೆಬ್ಬಗೋಡಿ ಠಾಣೆ ಪೋಲೀಸರು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ನಾಲ್ಕು ಅಂತಸ್ತಿನ ಕಟ್ಟಡದ ಎರಡನೆಯ ಮಹಡಿಯಲ್ಲಿ ದಂಪತಿ ಮನೆ ಬಾಡಿಗೆಗೆ ತೆಗೆದುಕೊಂಡಿದ್ದರು ಎಂದು ಕಟ್ಟಡದ ಮಾಲೀಕ ಶ್ರೀನಿವಾಸ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಪಿಯು ಶಿಕ್ಷಣ ಪೂರೈಸಿದ್ದ ದೇವನ್ ಹಾಗೂ ಚವಾಣ್ ಕಳೆದೆಂಟು ದಿನದ ಹಿಂದಷ್ಟೇ ನಗರಕ್ಕೆ ಆಗಮಿಸಿದ್ದರು ಎಂದು ಪೋಲೀಸರು ಮಾಹಿತಿ ನೀಡಿದರು. ಘಟನೆ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.