ಮಂಗಳೂರು-ಬೆಂಗಳುರು ರೈಲು
ಮಂಗಳೂರು-ಬೆಂಗಳುರು ರೈಲು

ಮಂಗಳೂರು-ಬೆಂಗಳೂರು ರೈಲು: ಫೆ.10ರಿಂದ ಶ್ರವಣಬೆಳಗೊಳ ಮಾರ್ಗದಲ್ಲಿ ಸಂಚಾರ

ಕರಾವಳಿ ಜನತೆಯ ನ್ನು ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮುಖ್ಯ ರೈಲು ಮಾರ್ಗ,ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ.
ಬೆಂಗಳೂರು: ಕರಾವಳಿ ಜನತೆಯ ನ್ನು ರಾಜಧಾನಿ ಬೆಂಗಳೂರಿಗೆ ತಲುಪಿಸುವ ಮುಖ್ಯ ರೈಲು ಮಾರ್ಗ,ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ. ವಾರದಲ್ಲಿ 4 ದಿನ ಯಶವಂತಪುರ–ಶ್ರವಣಬೆಳಗೊಳ ಮಾರ್ಗ ಹಾಗೂ 3 ದಿನ ಮೈಸೂರು ಮಾರ್ಗದಲ್ಲಿ ರೈಲು ಸಂಚಾರ ನಡೆಸಲಿದೆ. ಮುಂದಿನ ವರ್ಷದ ಫೆ.10ರಿಂದ ಈ ನೂತನ ಮಾರ್ಗಸೂಚಿ ಜಾರಿಗೆ ಬರಲಿದೆ.
ಇದಾಗಳೇ ಸಿದ್ದಗೊಂಡಿರುವ ಯಶವಂತಪುರ–ಶ್ರವಣಬೆಳಗೊಳ ಮಾರ್ಗದಿಂದಾಗಿ ರಾಜಧಾನಿಯಿಂದ ಮಂಗಳೂರಿಗೆ ತಲುಪುವ ಒಟ್ಟು ಸಂಚಾರ ಅವಧಿ 3 ಗಂಟೆಗಳಷ್ಟು ತಗ್ಗಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಬಂಟ್ವಾಳ ನಿಲ್ದಾಣದಲ್ಲಿ ನಿಂತು ಮಂಗಳೂರು ತಲುಪಲಿದ್ದು, ಅಲ್ಲಿಂದ ಮುಂದೆ ಕಾರವಾರ ಹಾಗೂ ಕಣ್ಣುರಿನತ್ತ ಸಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು-ಮಂಗಳೂರು ರೈಲಿನ ನೂತನ ವೇಳಾಪಟ್ಟಿ ಹೀಗಿದೆ- ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಸಂಜೆ 7.15ಕ್ಕೆ ಹೊರಟು ಮರುದಿನ ಬೆಳಗ್ಗೆ 6.20ಕ್ಕೆ ಮಂಗಳೂರು ಸೇರಲಿದೆ

Related Stories

No stories found.

Advertisement

X
Kannada Prabha
www.kannadaprabha.com