ತಂತ್ರಜ್ಞಾನದ ಬೆಳವಣಿಗೆಗಳೊಡನೆಯೇ ಮಾನವೀಯ ಮೌಲ್ಯಗಳು ಸಹ ಬೆಳೆಯಬೇಕು: ಸದ್ಗುರು ಜಗ್ಗಿ ವಾಸುದೇವ್

ಇಶಾ ಫೌಂಡೇಶನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಯಾವುದೇ ಬದಲಾವಣೆ ಇಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್
ಬೆಂಗಳೂರು: ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಯಾವುದೇ ಬದಲಾವಣೆ ಇಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನೂರು ಹಾಸಿಗೆಯ ರಾಮಯ್ಯ ಇಂಡಿಕ್ ವಿಶೇಷ ಆಯುರ್ವೇದ ರಿಸ್ಟೋರೇಷನ್ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದ್ದರು. 
ಎಂಎಸ್ ರಾಮಯ್ಯ ಸಂಸ್ಥೆಯ ವಿದ್ಯಾರ್ಥಿಗಳೊಡನೆ ಸಂವಾದ್ಸ ಅನಡೆಸುತ್ತಾ, "ತಂತ್ರಜ್ಞಾನವು ಈ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಮಾನವೀಯ ಮೌಲ್ಯಗಳು ಸಹ ಇದೇ ರೀತಿ ಬೆಳವಣಿಗೆಯಾಗಬೇಕು. ತಂತ್ರಜ್ಞಾನ ಅಭಿವೃದ್ಧಿ ಮೊಬೈಲ್ ಸಂಪರ್ಕವನ್ನು ಸುಧಾರಿಸಬಹುದು, ಆದರೆ ಇದು ಸಮಾಜವನ್ನು ಬದಲಿಸುವುದಿಲ್ಲ. ಕೇವಲ ಮಾನವೀಯ ಮೌಲ್ಯಗಳು ಸಮಾಜವನ್ನು ಬದಲಾಯಿಸಬಹುದು. " ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪಠ್ಯಗಳ ಮೇಲೆ ಗಮನಹರಿಸದೆ.  ಒಟ್ಟಾರೆ ಅಭಿವೃದ್ಧಿಯತ್ತ ಅವರು ಗಮನಹರಿಸಬೇಕು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com